ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಚಿತ್ರಗಳ ಮೂಲಕ ಸದ್ದು ಮಾಡಿರುವ ರಾಜ್ ಬಿ. ಶೆಟ್ಟಿಯಾವರ ಹೊಸ ಸಿನಿಮಾದ ಬಗ್ಗೆ ಇಂದು ಮಾಹಿತಿ ಹೊರಬಿದ್ದಿದೆ. ಅವರ ಹೊಸ ಚಿತ್ರಕ್ಕೆ 'ಟೋಬಿ' ಎಂದು ಶೀರ್ಷಿಕೆ ಇಡಲಾಗಿದೆ.
ಟೈಟಲ್ ಅನೌನ್ಸ್ ಮಾಡುವ ಸಲುವಾಗಿ ಮೋಷನ್ ಪೋಸ್ಟರ್ ಹಂಚಿಕೊಳ್ಳಲಾಗಿದೆ. 'ಮಾರಿ.. ಮಾರಿ.. ಮಾರಿಗೆ ದಾರಿ' ಎಂದು ಕ್ಯಾಪ್ಷನ್ನೊಂದಿಗೆ ಅವರು ಈ ಸುದ್ದಿ ತಿಳಿಸಿದ್ದಾರೆ. ಇನ್ನು, 'ಟೋಬಿ' ಚಿತ್ರದ ರಿಲೀಸ್ ದಿನಾಂಕದ ಬಗ್ಗೆಯೂ ರಾಜ್ ಬಿ. ಶೆಟ್ಟಿ ಅವರು ಅಪ್ಡೇಟ್ ನೀಡಿದ್ದು, ಆಗಸ್ಟ್ 25ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.
ಲೈಟರ್ ಬುದ್ಧ ಫಿಲ್ಮ್ಸ್' ಮೂಲಕ 'ಗರುಡ ಗಮನ ವೃಷಭ ವಾಹನ' ಸಿನಿಮಾ ಮೂಡಿಬಂದಿತ್ತು. ಈಗ ಅದೇ ಬ್ಯಾನರ್ನಲ್ಲಿ 'ಟೋಬಿ' ಸಿನಿಮಾ ಸಿದ್ಧವಾಗುತ್ತಿದೆ. 'ಅಗಸ್ತ್ಯ ಫಿಲ್ಮ್ಸ್' ಕೂಡ ಸಾಥ್ ನೀಡಿದೆ. ಈ ಸಿನಿಮಾದಲ್ಲಿ ರಾಜ್ ಬಿ. ಶೆಟ್ಟಿ ಜೊತೆ ಸಂಯುಕ್ತಾ ಹೊರನಾಡು ಮತ್ತು ಚೈತ್ರಾ ಆಚಾರ್ ಕೂಡ ನಟಿಸಿದ್ದಾರೆ. ಇದೊಂದು ಪಕ್ಕಾ ಮಾಸ್ ಸಿನಿಮಾ ಎಂದು ರಾಜ್ ಬಿ. ಶೆಟ್ಟಿ ಹೇಳಿದ್ದಾರೆ. 'ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕೆ ಹಾಗೂ ಟೋಬಿ ಚಿತ್ರತಂಡದ ಭಾಗವಾಗಿಸಿದ್ದಕ್ಕೆ ಧನ್ಯವಾದಗಳು. ರಾಜ್ ಬಿ. ಶೆಟ್ಟಿ ಮತ್ತು ಇಡೀ ತಂಡದಿಂದ ಸಿಕ್ಕ ಪ್ರೀತಿಗೆ ಧನ್ಯವಾದಗಳು' ಎಂದು ಸಂಯುಕ್ತಾ ಹೊರನಾಡು ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ