ಉಡುಪಿ:- ಲಂಚ ಪಡೆಯುವಾಗ ನಾಡಕಚೇರಿ ಸಿಬ್ಬಂದಿ ಲೋಕಾಯುಕ್ತ ಬಲೆಗೆ ಬಿದ್ದಿರುವಂತಹ ಘಟನೆ ಜಿಲ್ಲೆಯ ಕಾರ್ಕಳ ತಾಲೂಕಿನ ಅಜೆಕಾರುನಲ್ಲಿ ನಡೆದಿದೆ. ನಿಜಾಮುದ್ದಿನ್ ಲೋಕಾಯುಕ್ತ ಬಲೆಗೆ ಬಿದ್ದ ಸಿಬ್ಬಂದಿ. ಸಂತತಿ ನಕ್ಷೆ ಸಿದ್ದಪಡಿಸಲು ನಿನ್ನೆ ನಾಲ್ಕು ಸಾವಿರ ರೂ. ಪಡೆದಿದ್ದು, ಇಂದು ಬಾಕಿ 1 ಸಾವಿರ ರೂ. ಲಂಚ ಪಡೆಯುವಾಗ ಲೋಕಯುಕ್ತ ದಾಳಿ ಮಾಡಿದ್ದಾರೆ.
ಸದ್ಯ ನಾಡ ಕಚೇರಿ ಸಿಬ್ಬಂದಿ ನಿಜಾಮುದ್ದಿನ್ ವಶಕ್ಕೆ ಪಡೆದು ವಿಚಾರಣೆ ಮಾಡಿದ್ದು, ಹೆಚ್ಚು ಹಣಕ್ಕೆ ಬೇಡಿಕೆ ಇಟ್ಟಿದ್ದ ಎಂದು ಮಾಹಿತಿ ಸಿಕ್ಕಿದೆ ಲೋಕಯುಕ್ತ ಡಿವೈಎಸ್ಪಿ ಕೆಸಿ ಪ್ರಕಾಶ್, ಇನ್ಸ್ಪೆಕ್ಟರ್ ರಫೀಕ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ