ಉಡುಪಿ ಜಿಲ್ಲೆಯ ಕಾರ್ಕಳದ ಥೀಂ ಪಾರ್ಕ್ ಅನ್ನು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ನಿರ್ಮಾಣ ಮಾಡಿತ್ತು. ಇದರಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆದಿದ್ದರೆ ಯಾವುದೇ ತನಿಖೆಗೂ ಸಿದ್ಧ ಎಂದು ಮಾಜಿ ಸಚಿವ ಹಾಗೂ ಶಾಸಕ ವಿ.ಸುನಿಲ್ ಕುಮಾರ್ ತಮ್ಮ ವಿರೋಧಿಗಳಿಗೆ ಸವಾಲು ಎಸೆದಿದ್ದಾರೆ.
ಕಾರ್ಕಳದ ಬೈಲೂರಿನಲ್ಲಿ ನಿರ್ಮಾಣವಾಗಿರುವ ಪರಶುರಾಮ ಥೀಂ ಪಾರ್ಕ್‍ನ ಗುಣಮಟ್ಟ ಕುರಿತಂತೆ ಚರ್ಚೆಗಳು ನಡೆಯುತ್ತಿವೆ. ಇದಕ್ಕೆ ರಾಜಕೀಯ ಬಣ್ಣವನ್ನು ಬಳಿಯುವಂತಹ ಪ್ರಯತ್ನ ಕಾಂಗ್ರೆಸ್‍ನ ಕೆಲವು ನಾಯಕರಿಂದ ನಡೆಯುತ್ತದೆ. ಒಂದು ವೇಳೆ ಇದರಲ್ಲಿ ಯಾವುದೇ ರೀತಿಯ ಅವ್ಯವಹಾರ ಆಗಿದ್ದರೆ ನಾನು ತನಿಖೆ ಎದುರಿಸಲು ಸಿದ್ಧ ಎಂದರು.
ಪರಶುರಾಮ ಥೀಂ ಪಾರ್ಕಿಗೆ ನಾನು ಗುತ್ತಿಗೆದಾರನು ಅಲ್ಲ, ಅದು ನನ್ನ ಆಸ್ತಿಯು ಅಲ್ಲ. ಈ ಪ್ರತಿಮೆಯನ್ನು ಪ್ರವಾಸೋದ್ಯಮ ಬೆಳೆಯಬೇಕೆಂಬ ಕಾರಣಕ್ಕಾಗಿ ನಿರ್ಮಾಣ ಮಾಡಲಾಗಿದೆ. ಏಳೆಂಟು ವರ್ಷಗಳಿಂದ ಈ ಬಗ್ಗೆ ಚಿಂತನೆ ನಡೆಸಲಾಗಿತ್ತು. ಪಾರ್ಕ್ ನ ಗುಣಮಟ್ಟದ ಲ್ಲಿ ವ್ಯತ್ಯಾಸವಾಗಿದ್ದರೆ ಜಿಲ್ಲಾಡಳಿತ ತನಿಖೆ ನಡೆಸಲಿ, ಅದಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದು ಹೇಳಿದ್ದಾರೆ.
ಕೆಲವರಿಗೆ ಅಭಿವೃದ್ಧಿಯನ್ನು ಹೀಯಾಳಿಸುವುದೇ ಪ್ರವೃತ್ತಿಯಾಗಿದೆ. ಎಣ್ಣೆಹೊಳೆ ಡ್ಯಾಂ, ಯುಜಿಡಿ, ಬಿಳಿ ಬೆಂಡೆ ಬ್ರಾಂಡ್, ಮಾರಿಗುಡಿ ದೇವಸ್ಥಾನ ಅಭಿವೃದ್ಧಿಯ ಕಾರ್ಯ, ಕಾರ್ಕಳ ಉತ್ಸವ, ಕೈಗಾರಿಕೋದ್ಯಮದ ಬಗ್ಗೆ ಹೀಗೆ ಕಾರ್ಕಳದ ಅಭಿವೃದ್ಧಿ ಚಟುವಟಿಕೆಗಳನ್ನು ಅವರು ಹೀಯಾಳಿಸುತ್ತಲೇ ಬಂದಿದ್ದಾರೆ ಎಂದರು. ಕಾಂಗ್ರೆಸಿನ ಮಾನಸಿಕತೆ ಕಾಂಗ್ರೆಸಿಗರು ಇಂದಿರಾ ಗಾಂ ಮತ್ತವರ ಕುಟುಂಬ ಮಾಡಿದ ಕೆಲಸ ಕಾರ್ಯಗಳನ್ನು ಒಪ್ಪಿಕೊಳ್ಳುತ್ತಾರೆ. ಇದು ಅವರ ಮಾನಸಿಕತೆಯಾಗಿದೆ. ಒಂದು ವೇಳೆ ಥೀಂ ಪಾರ್ಕ್‍ನಲ್ಲಿ ಗಾಂಧಿ ಕುಟುಂಬದವರ ಪ್ರತಿಮೆಯನ್ನು ನಿರ್ಮಾಣ ಮಾಡುತ್ತಿದ್ದರೆ ಅದನ್ನು ಕಾಂಗ್ರೆಸಿಗರು ಸಂತೋಷದಿಂದ ಒಪ್ಪಿಕೊಳ್ಳುತ್ತಿದ್ದರು ಎಂದು ವ್ಯಂಗ್ಯವಾಡಿದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ