ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಜಿ7 ಶೃಂಗಸಭೆಯ ಸಂದರ್ಭ ಸೆಲ್ಫಿಗೆ ವೀಡಿಯೋಗೆ ಪೋಸ್ ನೀಡಿದ್ದಾರೆ. ಪೋಸ್ ನೀಡಿದ್ದಲ್ಲದೇ "ಹಲೋ ಫ್ರಂ ದಿ ಮೆಲೋಡಿ ಟೀಂ" ಎಂದು ಸ್ವತಃ ಇಟಲಿ ಪ್ರಧಾನಿ ಮೆಲೋನಿ ವಿಡಿಯೋ ಹಂಚಿಕೊಂಡಿದ್ದಾರೆ.
ಮೋದಿ ಹಾಗೂ ಮೆಲೋನಿ ಜೋಡಿಯನ್ನು ನೆಟ್ಟಿಗರು 'ಮೆಲೋಡಿʼ ಎಂದು ಕರೆದು ಯಾವಾಗಲೂ ನಾಯಕರ ಕಾಲೆಳೆಯುತ್ತಾರೆ. ಇಬ್ಬರ ಭೇಟಿಯ ಸಂದರ್ಭ ಯಾವಾಗಲೂ ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸುತ್ತಾರೆ. ಇದೀಗ ಮೋದಿ ಹಾಗೂ ಮೆಲೋನಿ ಸೆಲ್ಫಿ ಕ್ಲಿಕ್ಕಿಸಿಕೊಂಡಿರುವುದು ಟ್ರೋಲಿಗರು ಹಾಗೂ ಮೀಮ್ಸ್ ಮಾಡುವವರಿಗೆ ಹಬ್ಬವೇ ಎನಿಸಿಕೊಂಡಿದೆ.
ಶೃಂಗಸಭೆ ಆರಂಭವಾದ ದಿನವೂ ಮೆಲೋನಿ ವಿಶ್ವ ನಾಯಕರನ್ನು ಸ್ವಾಗತಿಸಲು ನಮಸ್ಕಾರ ಮಾಡಿರುವ ವೀಡಿಯೋ ಕೂಡಾ ಭಾರೀ ವೈರಲ್ ಆಗಿತ್ತು. ಮೇಲೋನಿ ಮೇಲೆ ಮೋದಿ ಪ್ರಭಾವ ಬೀರಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದರು.
ಈ ಹಿಂದೆ ಮೆಲೋನಿ ಮೋದಿ ಅವರನ್ನು ಭೇಟಿಯಾದಾಗ ಸೆಲ್ಫಿಯನ್ನು ಕ್ಲಿಕ್ಕಿಸಿಕೊಂಡು ತಮ್ಮ ಆತ್ಮೀಯ ಸ್ನೇಹಿತ ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ