ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಬಗ್ಗೆ ಚಿತ್ರನಟ ಸುದೀಪ್ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಭಾನುವಾರ ಈ ಕುರಿತು ತಮ್ಮ ಹೇಳಿಕೆ ನೀಡಿರುವ ಅವರು, ಯಾರೇ ಆಗಲಿ ಚಿತ್ರರಂಗಕ್ಕೆ ಕೆಟ್ಟ ಹೆಸರು ತರಬಾರದು ಎಂದಿದ್ದಾರೆ.
ಮೃತ ವ್ಯಕ್ತಿಯ ಕುಟುಂಬಕ್ಕೆ ನ್ಯಾಯ ಸಿಗಬೇಕು ಎನ್ನುವುದೇ ಎಲ್ಲರ ಮೊದಲ ಉದ್ದೇಶವಾಗಿದೆ. ಚಿತ್ರರಂಗಕ್ಕೆ ಕಪ್ಪು ಚುಕ್ಕೆ ತರುವುದನ್ನು ನಾನು ಇಷ್ಟಪಡುವುದಿಲ್ಲ. ಸ್ನೇಹಿತರೇ ಆಗಿರಲಿ ಯಾರೇ ಆಗಿರಲಿ, ಅವರಿಂದ ಚಿತ್ರರಂಗಕ್ಕೆ ಕೆಟ್ಟ ಹೆಸರು ಬರಬಾರದು. ನಾವು ಯಾರ ಪರವೂ ಇಲ್ಲ ಎಂದು ಸುದೀಪ್ ಹೇಳಿದ್ದಾರೆ.
ಚಿತ್ರರಂಗಕ್ಕೂ ಸಹ ನ್ಯಾಯ ಸಿಗಬೇಕು. ಬಾಳಿ ಬದುಕಬೇಕಿದ್ದ ರೇಣುಕಸ್ವಾಮಿ ಅವರಿಗೂ ನ್ಯಾಯ ಸಿಗಬೇಕು ಎಂದು ನಟ ಸುದೀಪ್ ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ, ಪೊಲೀಸರು, ಮಾಧ್ಯಮಗಳು ಎಲ್ಲರೂ ನ್ಯಾಯದ ಪರವಾಗಿದ್ದಾರೆ. ರೇಣುಕಾಸ್ವಾಮಿ ಕುಟುಂಬದ ಹೆಣ್ಣುಮಗಳಿಗೆ ನ್ಯಾಯಸಿಗಬೇಕಿದೆ. ಕಾನೂನಿನ ಬಗ್ಗೆ ಎಲ್ಲರಿಗೂ ಜಾಗೃತಿ ಮೂಡಬೇಕಿದೆ. ಇದೆ ನಮ್ಮ ಆಶಯವಾಗಿದೆ ಎಂದು ಸುದೀಪ್ ಹೇಳಿದ್ದು, ಚಿತ್ರರಂಗಕ್ಕೆ ಈ ಕಳಂಕದಿಂದ ಕ್ಲೀನ್ ಚಿಟ್ ಸಿಗಬೇಕಿದೆ ಎಂದಿದ್ದಾರೆ.
ದರ್ಶನ್ ಗೆ ಚಿತ್ರರಂಗದಿಂದ ಬಹಿಷ್ಕಾರ ಹಾಕುವ ಕುರಿತು ಮಾತಾಡಿದ ಅವರು, ನಾವು ಯಾರೂ ಕಾನೂನು ಜಾರಿಗೊಳಿಸಲು ಸಾಧ್ಯವಿಲ್ಲ. ಬ್ಯಾನ್ ಅನ್ನುವುದು ನಮ್ಮ ಪದವಲ್ಲ ಎಂದಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ