ಉಡುಪಿ,ಮೇ.11: ಅತಿಮಧ್ಯ ಸೇವನೆಯಿಂದ ಅಮಲೇರಿದ ಕುಡುಕನೊಬ್ಬ, ತನ್ನದೆ ಮನೆಗೆ ಬೆಂಕಿ ಹಿಡಿಸಿರುವ ಘಟನೆಯು, ನಗರದ ಹೊರವಲಯದ ಚಿಟ್ಪಾಡಿಯಲ್ಲಿ ರವಿವಾರ ನಡೆದಿದೆ.
ಕುಡುಕನ ರಂಪಾಟ, ಉಗ್ರ ವರ್ತನೆ ಎದುರಿಸಲು ಅಸಹಾಯಕರಾದ ಮನೆಯವರು, ಸಮಾಜಸೇವಕ ನಿತ್ಯಾನಂದ ಒಳಕಾಡುವರಲ್ಲಿ ನೆರವಿಗೆ ಬರುವಂತೆ ಹೇಳಿಕೊಂಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಒಳಕಾಡುವರು ಅಗ್ನಿಶಾಮಕ ದಳದವರಿಗೆ ವಿಷಯ ಮುಟ್ಟಿಸಿದ್ದಾರೆ. ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿ ದೊಡ್ಡ ಪ್ರಮಾಣದಲ್ಲಿ ಆಗಬಹುದಾದ ಅಗ್ನಿದುರಂತವನ್ನು ತಪ್ಪಿಸಿದ್ದಾರೆ. ಬಳಿಕ ಒಳಕಾಡುವರು ಕುಡುಕನ ಮೊನವೊಲಿಸಿ ಮಧ್ಯವರ್ಜನ ಕೇಂದ್ರಕ್ಕೆ ದಾಖಲುಪಡಿಸಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ