Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಉಡುಪಿ ಜಿಲ್ಲೆಯ ಸಿಎನ್‌ಜಿ ಸಮಸ್ಯೆ ಸರಿಪಡಿಸುವಂತೆ ಕೇಂದ್ರ ಸಚಿವರಿಗೆ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಪತ್ರ

Udupinews

 




ಉಡುಪಿ ಜಿಲ್ಲೆಯ ಸಿಎನ್‌ಜಿ ಸಮಸ್ಯೆ ಸರಿಪಡಿಸುವಂತೆ ಕೇಂದ್ರ ಸಚಿವರಿಗೆ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಪತ್ರ 


ಉಡುಪಿ ಜಿಲ್ಲೆಯ ವಾಹನ ಚಾಲಕರ ಸಿಎನ್‌ಜಿ ಸಮಸ್ಯೆಯನ್ನು ತಕ್ಷಣ ಸರಿಪಡಿಸುವಂತೆ ಕೋರಿ ಕೇಂದ್ರ ಪೆಟ್ರೋಲಿಯಂ ಸಚಿವರಿಗೆ ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

ಉಡುಪಿ ಜಿಲ್ಲೆಯ ರಿಕ್ಷಾ ಮತ್ತು ಕಾರುಗಳ ಸಹಿತ ಸಿಎನ್‌ಜಿ ಉಪಯೋಗಿ ಸುವ ವಾಹನಗಳಿಗೆ ಅನಿಲ ಸರಬರಾಜು ಕೊರತೆಯಿಂದ ಪೆಟ್ರೋಲ್ ಬಂಕ್‌ಗಳ ಎದುರು ನೂರಾರು ವಾಹನಗಳು ದಿನಗಟ್ಟಲೆ ಸಿಎನ್‌ಜಿಗಾಗಿ ಕಾಯುತ್ತಿರುವುದು ಕಂಡು ಬರುತ್ತಿದೆ. ಆಟೋರಿಕ್ಷಾ ಚಾಲಕರು ಮತ್ತು ಮಾಲಕರು ಬಡವರಾಗಿದ್ದು, ಗಂಭೀರ ಸಮಸ್ಯೆ ಎದುರಿಸುತ್ತಿದ್ದಾರೆ. 

ಉಡುಪಿ ಜಿಲ್ಲೆಯಲ್ಲಿ 8 ಸಿಎನ್‌ಜಿ ಔಟ್‌ಲೆಟ್‌ಗಳಿದ್ದು, ಎಲ್ಲಾ ವಿತರಣಾ ಸಂಸ್ಥೆಗಳಲ್ಲೂ ವಾಹನ ಚಾಲಕರು ಕಾಯುತ್ತಿದ್ದಾರೆ. ಹಿಂದೊಮ್ಮೆ ಇಂತಹ ಸಮಸ್ಯೆ ಉಂಟಾಗಿದ್ದು, ಕೇಂದ್ರ ಸರಕಾರದ ಮಧ್ಯಪ್ರವೇಶದಿಂದ ಸಮಸ್ಯೆ ಪರಿಹರಿಸಲಾಗಿದೆ. ಆದ್ದರಿಂದ ತಾವು ತಕ್ಷಣ ಮಧ್ಯ ಪ್ರವೇಶಿಸಿ ವಿತರಣಾ ಕೇಂದ್ರಗಳಿಗೆ ಸಿಎನ್‌ಜಿ ಸರಬರಾಜು ಮಾಡಲು ಆದೇಶ ನೀಡ ಬೇಕೆಂದು ಸಂಸದ ಕೋಟ ಕೇಂದ್ರ ಪೆಟ್ರೋಲಿಯಂ ಸಚಿವರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.









0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo