ಉಡುಪಿ: ಅಕಾಲಿಕ ಮಳೆಯಿಂದ ನೀರಿನ ಬಣ್ಣ ಬದಲು; ಕುದಿಸಿ ಕುಡಿಯುವಂತೆ ಸೂಚನೆ
ಉಡುಪಿ ನಗರಸಭಾ ವ್ಯಾಪ್ತಿಯ 35 ವಾರ್ಡ್ ಗಳಿಗೆ ಕುಡಿಯುವ ನೀರನ್ನು ಸರಬರಾಜು ಮಾಡುವ ಸ್ವರ್ಣಾ ನದಿಯ ಬಜೆ ಡ್ಯಾಂ, ಬಜೆ ನೀರು ಶುದ್ದೀಕರಣ ಘಟಕ (ಡಬ್ಲ್ಯುಟಿಪಿ) ಮಣಿಪಾಲ ಜಿಎಸ್‌ಎಲ್‌ಆರ್ ಘಟಕಗಳಿಗೆ ಭೇಟಿ ನೀಡಿ ಪರಿಶೀಲಿಸುವುದರೊಂದಿಗೆ ನೀರಿನ ಮಾದರಿಯನ್ನು ಪ್ರತೀ ತಿಂಗಳಿಗೊಮ್ಮೆ ಪರೀಕ್ಷಿಸಿ, ನೀರು ಕುಡಿಯಲು ಯೋಗ್ಯವಾಗಿರುವ ಬಗ್ಗೆ ವರದಿಯನ್ನು ಪಡೆಯಲಾಗುತ್ತಿದೆ.
ಆದರೂ ಸಹ ಇತ್ತೀಚಿನ ದಿನಗಳಲ್ಲಿ ಅಕಾಲಿಕ ಮಳೆಯಿಂದಾಗಿ ನೀರಿನ ಬಣ್ಣ ಬದಲಾಗಿದ್ದು, ಈ ನೀರು ಕುಡಿಯಲು ಯೋಗ್ಯ ವಾಗಿದ್ದರೂ ಸಹ ಆರೋಗ್ಯದ ಹಿತದೃಷ್ಟಿಯಿಂದ ನೀರನ್ನು ಕುದಿಸಿ ಕುಡಿಯುವಂತೆ ಉಡುಪಿ ನಗರಸಭೆಯ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ