ಮಣಿಪಾಲ: ಪರವಾನಗಿ ಇಲ್ಲದೆ ಅಕ್ರಮ ಪಟಾಕಿ ಮಾರಾಟ: ಆರೋಪಿ ಬಂಧನ
ಮಣಿಪಾಲ: ಪರವಾನಿಗೆ ಇಲ್ಲದೇ ಅಕ್ರಮವಾಗಿ ಪಟಾಕಿ ಮಾರಾಟ ಮಾಡುತ್ತಿದ್ದ ಅಂಗಡಿಯ ಮೇಲೆ ಪೊಲೀಸರು ದಾಳಿ ನಡೆಸಿ, ಪಟಾಕಿಯನ್ನು ಮುಟ್ಟುಗೋಲು ಹಾಕಿಕೊಂಡು ಆರೋಪಿಯನ್ನು ವಶಕ್ಕೆ ಪಡೆದ ಘಟನೆ ಮಣಿಪಾಲದ ಪರ್ಕಳ ಎಂಬಲ್ಲಿ ನಡೆದಿದೆ.
ಪ್ರಕಾಶ್ ಸ್ಟೋರ್ಸ್ ಎಂಬ ಅಂಗಡಿಯಲ್ಲಿ ಪ್ರಕಾಶ್ ಡಿ. ಎಂಬಾತ ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೇ ಸುಡುಮದ್ದುಗಳನ್ನ ಸಂಗ್ರಹಿಸಿ ಇಟ್ಟಿದ್ದು, ಈ ಬಗ್ಗೆ ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಮಣಿಪಾಲ ಪೊಲೀಸರು, ಆರೋಪಿ ಪ್ರಕಾಶ್ ಹಾಗೂ ಸುಮಾರು 42397 ರೂ. ಮೌಲ್ಯದ ವಿವಿಧ ಪಟಾಕಿಗಳನ್ನು ವಶಪಡಿಸಿಕೊಂಡಿ ದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ