Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಮಣಿಪಾಲ: ಐಟಿ ಅಧಿಕಾರಿಗಳಿಂದ ದಾಳಿ ಬೆದರಿಕೆ: ಕೆಲಸದಾಕೆಯಿಂದ ಲಕ್ಷಾಂತರ ರೂ ವಂಚನೆ

Udupinews

 







ಮಣಿಪಾಲ: ಐಟಿ ಅಧಿಕಾರಿಗಳಿಂದ ದಾಳಿ ಬೆದರಿಕೆ: ಕೆಲಸದಾಕೆಯಿಂದ ಲಕ್ಷಾಂತರ ರೂ ವಂಚನೆ 



ಮಣಿಪಾಲ: ಐ.ಟಿ. ಅಧಿಕಾರಿಗಳು ದಾಳಿ ನಡೆಸುತ್ತಾರೆ ಎಂದು ನಂಬಿಸಿ 7.50 ಲಕ್ಷ ರೂ. ನಗದು ಹಾಗೂ 3 ಲಕ್ಷ ಬೆಲೆಬಾಳುವ ಡೈಮಂಡ್‌ ಸರ ತೆಗೆದುಕೊಂಡು ಹೋಗಿ ಮನೆ ಯಜಮಾನನಿಗೆ ಮೋಸ ಮಾಡಿರುವ ಘಟನೆ ಮಣಿಪಾಲದಲ್ಲಿ ನಡೆದಿದೆ.

ಶಿವಳ್ಳಿ ಗ್ರಾಮದ ನಿವಾಸಿ ಪೆರಂಪಳ್ಳಿ ರಸ್ತೆಯ ಜ್ಯೂಲಿಯಟ್‌ ಅವರು 4 ತಿಂಗಳಿನಿಂದ ಪೆರಂಪಳ್ಳಿಯ ಸುನೀತಾ ಅವರನ್ನು ಮನೆ ಕೆಲಸಕ್ಕೆ ಇಟ್ಟುಕೊಂಡಿದ್ದರು. ಕೆಲಸದಾಕೆ ಬಳಿ ಮನೆಯ ಯಜಮಾನಿ ತನ್ನ ಮತ್ತು ಗಂಡನ ನಡುವೆ ಇದ್ದ ಮನಸ್ತಾಪದ ಬಗ್ಗೆ ಹೇಳಿಕೊಂಡಿದ್ದರು. ಸುನೀತಾ ಅವರು ಜೂಲಿಯೆಟ್‌ಗೆ ಗಂಡನಿಗೆ ವಿಚ್ಛೇದನ ಕೊಡುವಂತೆ ಸಲಹೆ ನೀಡಿದ್ದರು. ಬೇಸರಗೊಂಡ ಜ್ಯೂಲಿಯೆಟ್‌ ಮನೆ ಬಿಟ್ಟು ಹೋಗಲು ನಿರ್ಧರಿಸಿದ್ದರು. ತಾಯಿಯನ್ನು ಮನೆಗೆ ಬರಲು ಹೇಳಿ ಅ. 10ರಂದು ತಾಯಿಯಲ್ಲಿ ಬಟ್ಟೆಬರೆ ಹಾಗೂ ಸ್ವಲ್ಪ ಚಿನ್ನ ಹಾಗೂ ಗಂಡನ ಮನೆಯ ಲಾಕರ್‌ನಲ್ಲಿ ಇರಿಸಿದ್ದ 10 ಲಕ್ಷ ರೂಪಾಯಿಯಲ್ಲಿ 1 ಲಕ್ಷ ರೂ. ಹಣವನ್ನು ನೀಡಿದ್ದರು.

29ರಂದು ಬೆಳಗ್ಗೆ 10.30ಕ್ಕೆ ಗಂಟೆಗೆ ಜ್ಯೂಲಿಯೆಟ್‌ ಮನೆಯಲ್ಲಿದ್ದಾಗಲೇ ಸುನೀತಾ ಅವರು ಸ್ಟ್ಯಾನಿ ಅವರೊಂದಿಗೆ ಮನೆಗೆ ಬಂದು ಐ.ಟಿ. ಅಧಿಕಾರಿಗಳು ಬಂದಿದ್ದಾರೆ. ನಿಮ್ಮ ಮನೆಗೆ ರೈಡ್‌ ಮಾಡುತ್ತಾರೆ. ಲಾಕರ್‌ನಲ್ಲಿ ಇದ್ದ ಹಣ ಹಾಗೂ ಒಡವೆಯನ್ನು ತೆಗೆಯಬೇಕು ಎಂದು ಹೇಳಿ ಲಾಕರ್‌ ಕೀ ತೆಗೆದುಕೊಂಡು ಲಾಕರ್‌ ಓಪನ್‌ ಮಾಡಿ ಅದರಲ್ಲಿ ಇದ್ದ ಹಣದಲ್ಲಿ 1.50 ಲಕ್ಷ ರೂ.ಗಳನ್ನು ಜ್ಯೂಲಿಯೆಟ್‌ ಅವರ ಬ್ಯಾಗ್‌ ಗೆ ಹಾಕಿ ಉಳಿದ 7 ಲಕ್ಷ 50 ಸಾವಿರ ರೂ. ಹಾಗೂ 3 ಲಕ್ಷ ಬೆಲೆಬಾಳುವ ಡೈಮಂಡ್‌ ನೆಕ್ಲೆಸ್‌ ಅವಳ ಚೀಲದಲ್ಲಿ ಹಾಕಿಕೊಂಡು ನನ್ನಲ್ಲಿ ಇರಲಿ ಆನಂತರ ಕೊಡುತ್ತೇನೆ ಎಂದು ಹೇಳಿದ್ದರು.

ಐ.ಟಿ.ಅಧಿಕಾರಿಗಳು ದಾಳಿ ನಡೆಸುತ್ತಾರೆ ಎಂದು ನಂಬಿಸಿ ಸುನೀತಾ ಹಾಗೂ ಸ್ಟಾನಿ 7.50 ಲಕ್ಷ ರೂ. ನಗದು ಹಾಗೂ 3 ಲಕ್ಷ ಬೆಲೆಬಾಳುವ ಡೈಮಂಡ್‌ ಸರವನ್ನು ತೆಗೆದುಕೊಂಡು ಹೋಗಿ ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo