ಕಾರವಾರ: ದನ ಕಳ್ಳತನ ಮಾಡಿದರೆ ಸರ್ಕಲ್‌ನಲ್ಲಿ ನಿಲ್ಲಿಸಿ ಗುಂಡು ಹಾರಿಸಲಾಗುವುದು ಎಂದು ಉಸ್ತುವಾರಿ ಸಚಿವ ಮಂಕಾಳ ವೈದ್ಯ ಪತ್ರಿಕಾಗೋಷ್ಠಿಯಲ್ಲಿ ದನ ಕಳ್ಳರಿಗೆ ಎಚ್ಚರಿಕೆ ನೀಡಿದರು.
ನಮ್ಮ ಸರಕಾರವು ದನಗಳನ್ನು ಕಳ್ಳತನ ಮಾಡಿದವರನ್ನು ಹಿಡಿದು ಪ್ರಕರಣ ದಾಖಲಿಸಿ, ಜೈಲಿಗೆ ಕಳಿಸಿದೆ. ಕಾನೂನು ಉಲ್ಲಂಘಿಸಿದವರನ್ನು ಹೇಗೆ ಶಿಕ್ಷಿಸಿದ್ದೇವೆ ಎಂಬುದನ್ನು ಸಮಾಜ ನೋಡಿದೆ.
ಮುಂದೆ ದನ ಕಳ್ಳತನ ಮಾಡಿದರೆ ಸರ್ಕಲ್‌ನಲ್ಲಿ ನಿಲ್ಲಿಸಿ ಗುಂಡು ಹಾರಿಸಲಾಗುವುದು. ಮುಖ್ಯಮಂತ್ರಿ, ಗೃಹ ಸಚಿವರ ಬಗ್ಗೆ ಕುಮಟಾ ಶಾಸಕ ದಿನಕರ ಶೆಟ್ಟಿ ಹಗುರವಾಗಿ ಮಾತಾಡಿದ್ದಾರೆ. ಬಿಜೆಪಿ ಸರಕಾರದ ಇದ್ದಾಗ ನಡೆದ ದನಗಳ್ಳರ ವಿರುದ್ಧ ಏನೂ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ