ರಾಜ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ರಾಜ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಚಿಕ್ಕನಾಯಕನಹಳ್ಳಿ ಶ್ರೀ ಮದ್ದರ ಲಕ್ಕಮ್ಮ ಕ್ಷೇತ್ರಕ್ಕೆ ಶ್ರೀ ಶ್ರೀ ರಮಾನಂದ ಗುರೂಜಿ ಭೇಟಿ


 ಕಲ್ಪತರು ನಾಡು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಶಕ್ತಿಮಾತೆ ಶ್ರೀ ಸರ್ವೇಶ್ವರಿ ಮಹಾಲಕ್ಷ್ಮಿ ಮದ್ದರ ಲಕ್ಕಮ್ಮ ದೇವಿ ಕ್ಷೇತ್ರಕ್ಕೆ ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀ ರಮಾನಂದ ಗುರೂಜಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು..

 ದೇವಸ್ಥಾನದ ಮುಖ್ಯಸ್ಥರಾದ ಶ್ರೀ ರಂಗಸ್ವಾಮಿ ಅವರ ವಿಶೇಷ ಆಹ್ವಾನ ದ ಮೇರೆಗೆ ಭೇಟಿಯಿತ್ತ ಗುರೂಜಿಯವರು ಕ್ಷೇತ್ರದ ಸಮಗ್ರ ಜೀರ್ಣೋದ್ಧಾರಕ್ಕಾಗಿ ಹಾಗೂ ಶಕ್ತಿಮಾತೆಯ ವಿಶೇಷ ಚೈತನ್ಯ ಅಭಿವೃದ್ಧಿಗಾಗಿ ಸೂಕ್ತ ಮಾರ್ಗದರ್ಶನ ನೀಡಿದರು...

 ದೇವಳದ ವತಿಯಿಂದ ಕರೆಯಲಾಗಿದ್ದ ವಿಶೇಷ ಸಭೆಯಲ್ಲಿ ಮುಖ್ಯಸ್ಥರಾದ ಶ್ರೀ ರಂಗ ಸ್ವಾಮಿ ಹಾಗೂ ಶ್ರೀಮತಿ ನಾಗರತ್ನ ಶ್ರೀ ಲಕ್ಷ್ಮೀಶ ಶ್ರೀಯುತ ಮೋಹಿತ್ ಪ್ರಶಾಂತ್ ಗಣೇಶ್ ಆನಂದ ಬಾಯರಿ ಈ ಕ್ಷೇತ್ರ ಆದಿಶಕ್ತಿಯ ಆಡಳಿತ ಅಧಿಕಾರಿ ಶ್ರೀಮತಿ ಕುಸುಮ ನಾಗರಾಜ್ ಉಪಸ್ಥಿತರಿದ್ದರು..

 ದೇವಳದ ವತಿಯಿಂದ ಶ್ರೀ ಗುರೂಜಿಯವರನ್ನು ಪೇಟತೊಡಿಸಿ ಶಾಲು ಹೊದಿಸಿ ಹಾರ ಫಲ ಪುಷ್ಪಗಳನ್ನಿಟ್ಟು ವಿಶೇಷವಾಗಿ ಗೌರವಿಸಲಾಯಿತು.. ಕರಿ ಕಂಬಳಿ ಶಾಲನ್ನು ಉಡುಗೊರೆಯಾಗಿ ನೀಡಲಾಯಿತು 

ನೆರೆದ ಭಕ್ತರಲ್ಲರಿಗೂ ಶ್ರೀ ಗುರೂಜಿಯವರು ದುರ್ಗಾ ಆದಿಶಕ್ತಿಯ ಅನುಗ್ರಹ ಪ್ರಸಾದವನ್ನು ನೀಡಿ ಆಶೀರ್ವದಿಸಿದರು 






.

© all rights reserved
made with by templateszoo