ಕೃಷ್ಣ ಜನ್ಮಾಷ್ಟಮಿಯ ವಿಶೇಷ ಲೇಖನ
ಕಡೆಗೋಲು ಶ್ರೀಕೃಷ್ಣ
ಉಡುಪಿ ಪ್ರವಾಸಿ ತಾಣಗಳ ತವರೂರು. ರಾಜ್ಯದ ಮೂಲೆ ಮೂಲೆಗಳಿಂದ ಪ್ರವಾಸಿಗರು ಉಡುಪಿಗೆ ಆಗಮಿಸಿ ಇಲ್ಲಿನ ರಮಣೀಯ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾರೆ. ಅಂತೆಯೇ ರಾಜ್ಯದ ಹಲವು ಪ್ರಸಿದ್ಧ ಯಾತ್ರಾಸ್ಥಳಗಳಲ್ಲಿ ಉಡುಪಿಯ ಶ್ರೀಕೃಷ್ಣ ಮಠ ಕೂಡ ಒಂದು.
ಪುರಾಣಗಳಲ್ಲಿ ಉಲ್ಲೇಖವಿರುವ ಪ್ರಕಾರ ಶ್ರೀ ಕೃಷ್ಣನು ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿಯ ಶುಭ ದಿನದಂದು ಮಥುರ ನಗರದ ಕಾರಗ್ರಹದಲ್ಲಿ ಮಧ್ಯರಾತ್ರಿ ಜನಿಸಿದನು. ಕೃಷ್ಣನು ಜನಿಸಿದ ತಕ್ಷಣ ತಂದೆ ವಾಸುದೇವ ಅವನನ್ನು ಸೋದರಮಾವನಾದ ಕಂಸನಿಗೆ ತಿಳಿಯದಂತೆ ಗೋಕುಲಕ್ಕೆ ಕರೆದೊಯ್ಯುತ್ತಾನೆ. ಅಲ್ಲಿ ಕಂಸನ ಸ್ನೇಹಿತನಾದ ನಂದರಾಜನ ಮನೆಗೆ ಕೃಷ್ಣನನ್ನು ಕರೆತರುತ್ತಾನೆ. ಅದೇ ಸಮಯದಲ್ಲಿ ನಂದರಾಜನ ಪತ್ನಿ ಯಶೋಧಾ ಕೂಡ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ. ಆ ಸಮಯದಲ್ಲಿ ತನ್ನ ಮಗ ಕೃಷ್ಣನನ್ನು ಯಶೋಧಾ ಹೂ ಮಡಿಲಲ್ಲಿ ಮಲಗಿಸಿ ಆಕೆಯ ಹೆಣ್ಣು ಮಗುವನ್ನು ತನ್ನೊಂದಿಗೆ ಕರೆದುಕೊಂಡು ಹೋಗುತ್ತಾನೆ.
ಪುರಾಣ ಕಥೆಯ ಪ್ರಕಾರ ನಂದರಾಜನಿಗೆ ಹೆಣ್ಣು ಮಗು ಜನಿಸಿದ ತಕ್ಷಣ ವಾಸುದೇವ ತನ್ನಲ್ಲಿಗೆ ಆಗಮಿಸುತ್ತಾನೆ ಎಂಬುದು ನಂದನಿಗೆ ಮೊದಲೇ ತಿಳಿದಿತ್ತು. ಆದ್ದರಿಂದ ತನಗೆ ಹೆಣ್ಣುಮಗು ಜನಿಸಿದ ತಕ್ಷಣ ವಾಸುದೇವನ ಆಗಮನವನ್ನು ನಿರೀಕ್ಷಿಸುತ್ತಾ ಬಾಗಿಲಲ್ಲಿ ಕಾಯುತ್ತಿದ್ದನು.
ವಾಸುದೇವ ಧಾವಿಸಿದ ನಂತರ ನಂದನು ಕೂಡಲೇ ತನ್ನ ಮಗಳನ್ನು ವಾಸುದೇವನ ಮಡಿಲಲ್ಲಿಟ್ಟು ಬಂದನು. ಈ ಕೊನೆ ಸಂಭವಿಸಿದ ನಂತರ ವಾಸುದೇವ ಮತ್ತು ನಂದರಿಬ್ಬರೂ ಕೂಡ ಯೋಗಮಾಯೆಯ ಪ್ರಭಾವದಿಂದ ನಡೆದ ಎಲ್ಲಾ ಘಟನೆಯನ್ನು ಮರೆತರು.
ಯೋಗಮಾಯೆಯಿಂದ ವಾಸುದೇವನು ನಂದರಾಜನ ಮಗಳೊಂದಿಗೆ ಮಥುರಾದ ಕಾರಗ್ರಹಕ್ಕೆ ಮರಳಿದನು. ನಂತರ ಕಂಸನಿಗೆ, ದೇವಕಿ ಮತ್ತು ವಾಸುದೇವರಿಗೆ ಎಂಟನೆ ಮಗು ಆಗಿರುವ ವಿಷಯ ತಿಳಿದು ಆ ಹೆಣ್ಣು ಮಗುವನ್ನು ಸಾಯಿಸಲು ಜೈಲಿಗೆ ಬರುತ್ತಾನೆ. ಆ ಹೆಣ್ಣು ಶಿಶುವನ್ನು ಕಲ್ಲಿನ ಮೇಲಿಟ್ಟು ಕೊಲ್ಲಲು ಯತ್ನಸಿದಾಗ ಆ ಮಗುವು ಆಕಾಶಕ್ಕೆ ಜಿಗಿದು ತನ್ನ ದಿವ್ಯ ರೂಪವನ್ನು ಪ್ರದರ್ಶಿಸುತ್ತಾಳೆ. ಕಂಸನಿಗೆ ಆತನ ಸಂಸ್ಕಾರವನ್ನು ದೃಡಪಡಿಸಿ ವಿಂದ್ಯಾಚಲ ಪರ್ವತವನ್ನೇರಿ ಕುಳಿತುಕೊಳ್ಳುತ್ತಾರೆ. ನಂತರ ಇಂದಿಗೂ ಆಕೆಯನ್ನು ವಿಂದ್ಯವಾಸಿನಿ ಎಂದು ಕರೆಯುತ್ತಾರೆ. ಇದು ಕೃಷ್ಣನ ಜಾನಪದ ಕುರಿತಿರುವ ರೋಚಕ ಕಥೆ.
ಅತ್ಯಂತ ಪ್ರಾಚೀನ ಕಾಲದಲ್ಲಿ ಉತ್ತರ ಪ್ರದೇಶದ ದ್ವಾರಕ ನಗರದಲ್ಲಿ ಇದ್ದ ಶ್ರೀಕೃಷ್ಣನ ಮೂರ್ತಿಯನ್ನು ಚಂದ್ರನಿಂದ ಸಂಪೂರ್ಣವಾಗಿ ಮುಚ್ಚಿಡಲಾಗಿತ್ತು. ದೋಣಿ ಸಾಗಿಸುವ ನಾವಿಕನೊಬ್ಬ ಇಡೀ ಚಂದನದ ದೊಡ್ಡ ಉಂಡೆಯನ್ನೆ ಕೃಷ್ಣನ ಮೂರ್ತಿ ಸಮೇತ ದೋಣಿಯಲ್ಲಿ ಎತ್ತಿಟ್ಟುಕೊಂಡು ಕರಾವಳಿಯ ಕಡೆಗೆ ಬಂದನು. ಬರುವ ಮಾರ್ಗದಲ್ಲಿ ಹಡಗು ರಭಸವಾದಗ ಬಿರುಗಾಳಿಗೆ ಸಿಲುಕಿತು. ನಾವಿಕ ಬಿರುಗಾಳಿಗೆ ಹೆದರಿ ಕಂಗಲಾಗಿ ಹೋದ. ನಂತರ ಮಧ್ವಾಚಾರ್ಯರು ದಿವ್ಯ ದೃಷ್ಟಿಯಿಂದ ದೋಣಿಯಲ್ಲಿ ಕೃಷ್ಣನ ಮೂರ್ತಿ ಇದ್ದನ್ನು ಮೊದಲೆ ಅರಿತಿದ್ದರು. ಆದ ಕಾರಣ ಅವರು ಆ ದೋಣಿಯನ್ನು ರಕ್ಷಿಸಿ ದಡಕ್ಕೆ ಕರೆತರಲು ಸಹಾಯ ಮಾಡಿದರು.
ನಂತರ ನಾವಿಕನಿಗೆ ಕೃಷ್ಣನ ಮೂರ್ತಿಯನ್ನು ನನಗೆ ಕೊಡು ಎಂದು ಕೇಳಿದರು ಅದಕ್ಕೆ ನಾವಿಕ ಸಂತೋಷದಿಂದ ತನಗೆ ಸಹಾಯ ಮಾಡಿದ್ದಕ್ಕಾಗಿ ಮಧ್ವಾಚಾರ್ಯರಿಗೆ ಕೊಟ್ಟನು. ಮಧ್ವಾಚಾರ್ಯರು ಆ ಮೂರ್ತಿಯನ್ನು ತಂದು ಶುದ್ಧವಾದ ಜಲದಲ್ಲಿ ತೊಳೆದ ನಂತರ ಶ್ರೀ ಕೃಷ್ಣನ ನಿಜವಾದ ರೂಪ ಕಾಣಿಸುತ್ತದೆ. ಈ ಶ್ರೀ ಕೃಷ್ಣನ ವಿಗ್ರಹವನ್ನು 13 ನೇ ಶತಮಾನದ ಸಂಕ್ರಾಂತಿಯ ದಿನದಂದು ಉಡುಪಿಯಲ್ಲಿ ಮಧ್ವಾಚಾರ್ಯರು ತಮ್ಮ ಮಠದಲ್ಲಿ ಸ್ಥಾಪಿಸಿದರು.
16 ನೇ ಶತಮಾನದಲ್ಲಿ ಕುರುಬ ಜನಾಂಗದವಾರದ ಕನಕದಾಸರು ಶ್ರೀಕೃಷ್ಣನ ದರ್ಶನವನ್ನು ಪಡೆಯಲು ಬಂದಾಗ ಅಲ್ಲಿನ ಪಂಡಿತರು ಅವರನ್ನು ದೇವಸ್ಥಾನದಿಂದ ಹೊರದಬ್ಬಿದರು. ಇದರಿಂದ ನೊಂದ ಕನಕದಾಸರು ಗರ್ಭಗುಡಿಯಲ್ಲಿ ನಿಂತು ಕೃಷ್ಣನನ್ನು ಭಕ್ತಿಯಿಂದ ಪ್ರಾರ್ಥಿಸಿದರು. ದೇವರಿಗೆ ಕುಲಧರ್ಮವೆಂಬ ಭೇದಭಾವ ವಿದೆಯೆ?. ಆತನಿಗೆ ಬೇಕಾಗಿರುವುದು ಭಕ್ತಿ ಮಾತ್ರವೆ ಹೊರತು ಬೇರೆನಲ್ಲ. ಇದರಿಂದ ಸಂತುಷ್ಟನಾದ ಕೃಷ್ಣನು ದೇವಾಲಯದ ಹಿಂಭಾಗಕ್ಕೆ ತಿರುಗಿ ಕನಕದಾಸರಿಗೆ ದರ್ಶನ ಭಾಗ್ಯವನ್ನು ನೀಡಿದನು. ಅ ಸ್ಥಳ ಕನಕನ ಕಿಂಡಿ ಎಂದು ಪ್ರಸಿದ್ಧಿ ಪಡೆದಿದೆ.
ಅಂತೆಯೆ ಕೃಷ್ಣ ಜನ್ಮಾಷ್ಟಮಿಯನ್ನು ವರ್ಷಂಪ್ರತಿ ಉಡುಪಿಯಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ರಾಜ್ಯದ ಮೂಲೆ ಮೂಲೆಗಳಿಂದ ಜನರು ಉಡುಪಿಯ ಕೃಷ್ಣ ಜನ್ಮಾಷ್ಟಮಿ ಗೆ ಆಗಮಿಸಿ ಕೃಷ್ಣನ ದರ್ಶನವನ್ನು ಪಡೆಯುತ್ತಾರೆ.
ಕೃಷ್ಣ ಜನ್ಮಾಷ್ಟಮಿಯನ್ನು ಉಡುಪಿಯಲ್ಲಿ ಎರಡು ದಿನ ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾರೆ. ಮೊದಲ ದಿನ ಮಠದ ಭಕ್ತಾದಿಗಳು ಮದ್ಯರಾತ್ರಿ ಯವರೆಗೆ ಉಪವಾಸದಲ್ಲಿದ್ದು ಕೃಪ್ಣನಿಗೆ ಉಂಡೆ ಚಕ್ಕುಲಿಯನ್ನು ನೈವೇದ್ಯವಿಟ್ಟು ಕೃಷ್ಣನನ್ನು ಆರಾಧಿಸುತ್ತಾರೆ. ಮಾರನೇಯ ದಿನ ಮೊಸರುಕುಡಿಕೆ ಕಾರ್ಯಕ್ರಮ ಜರುಗುತ್ತದೆ. ಈ ಕಾರ್ಯಕ್ರಮ ಹಲವಾರು ಸಾಂಸ್ಕೃತಿಕ ವೇಷದೊದಿಗೆ ವಿಜೃಂಭಣೆಯಿಂದ ನಡೆಯುತ್ತದೆ.
ಆದರೆ ಈ ಬಾರಿಯ ಜಿಲ್ಲೆಯಲ್ಲಿ ಕೋರೋನಾ ಉಲ್ಬಣವಾದ ಹಿನ್ನೆಲೆಯಲ್ಲಿ ಬಹಳ ಸರಳವಾಗಿ ಆಚರಿಸಲಾಗುತ್ತಿದೆ. ಈ ಸಮಯದಲ್ಲಿ ನಿಗದಿತ ಸಮಯದಲ್ಲಿ ಶ್ರೀ ಕೃಷ್ಣನ ದರ್ಶನಕ್ಕೆ ಅವಕಾಶವಿದೆ. ಅರ್ಘ್ಯ ಪ್ರಧಾನಕ್ಕೆ ಮೂರು ಕಡೆ ಅವಕಾಶ ಕಲ್ಪಿಸಲಾಗಿದೆ. ಉಂಡೆ ಮತ್ತು ಚಕ್ಕುಲಿ ವಿತರಣೆಗೆ ಅವಕಾಶವಿದೆ. ಮಠದಲ್ಲಿ ನಡೆಯಬೇಕಾದ ಸಾಂಪ್ರದಾಯಿಕ ಆಚರಣೆಗಳಿಗೆ ಅವಕಾಶವಿದೆ. ಇನ್ನು ಏನೇನು ಇರುವುದಿಲ್ಲ ಎಂದು ನೋಡುವುದಾದರೆ ವಿಟ್ಲಪಿಂಡಿಗೆ ಸಾರ್ವಜನಿಕರಿಗೆ ಅವಕಾಶವಿಲ್ಲ. ರಾಜಾಂಗಣದಲ್ಲಿ ನಡೆಯುತ್ತಿದ್ದ ಕೃಷ್ಣವೇಷ ಸ್ಪರ್ಧೆಗೆ ಅನುಮತಿ ಇಲ್ಲ. ಇನ್ನು ಹುಲಿವೇಷದಾರರಿಗೆ ಜಿಲ್ಲಾಡಳಿತ ಅನುಮತಿ ಕೊಟ್ಟಿಲ್ಲ. ವಿಟ್ಲಪಿಂಡಿಯ ದಿನ ಮಧ್ಯಾಹ್ನದ ಸಾರ್ವಜನಿಕ ಅನ್ನಸಂತರ್ಪಣೆ ಇರುವುದಿಲ್ಲ. ನಂತರ ಕೃಷ್ಣ ಮಠದಲ್ಲಿ ನಡೆಯುತಿದ್ದ ಯಾವುದೇ ಸ್ಪರ್ಧೆಗಳು ನಡೆಯುವುದಿಲ್ಲ ಎಂದು ಮಠದ ಪೀಠಾಧಿಕಾರಿಗಳು ತಿಳಿಸಿರುತ್ತಾರೆ.
✍️ಕಾರ್ತಿಕ್ ಹಂಗಾರಕಟ್ಟೆ
ಶ್ರೀಕೃಷ್ಣನ ಪೌರಾಣಿಕ ಚರಿತ್ರೆಯನ್ನ ತುಂಬಾ ಸೊಗಸಾಗಿ ತಿಳಿ ಹೇಳಿದ್ದಿರಾ .. ಧನ್ಯವಾದಗಳು 😍🙏🙏
ಪ್ರತ್ಯುತ್ತರಅಳಿಸಿಕೃಷ್ಣಂ ವಂದೇ ಜಗದ್ಗುರುಂ..