Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಉಡುಪಿ:-ಹಿರಿಯ ಸಂಗೀತ ನಿರ್ದೇಶಕ ಶ್ರೀ.ಕೆ.ರಾಘವೇಂದ್ರ ಭಟ್ ಇನ್ನಿಲ್ಲ26-11-2021

ಉಡುಪಿ: ರಂಗಭೂಮಿಯ ಖ್ಯಾತ ಹಿರಿಯ ಸಂಗೀತ ನಿರ್ದೇಶಕ ಶ್ರೀ ಕೆ.ರಾಘವೇಂದ್ರ ಭಟ್ ಶುಕ್ರವಾರ ಬೆಳಿಗ್ಗೆ 7.30ಕ್ಕೆ ತಮ್ಮ ಸ್ವ ನಿವಾಸದಲ್ಲಿ ವಯೋಸಹಜ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.
ರಂಗಭೂಮಿ (ರಿ.)ನ ಉಡುಪಿ ತಂಡದ ಅನೇಕ  ನಾಟಕಗಳಿಗೆ ಸಂಗೀತ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ರಂಗಭೂಮಿ ತಂಡ ಭಾಗವಹಿಸಿದ್ದ ಹಲವಾರು ನಾಟಕ ಸ್ಪರ್ಧೆಗಳಲ್ಲಿ ಸಂಗೀತಕ್ಕೆ ಬಹುಮಾನ ಲಭಿಸಿತ್ತು. ಒಂದು ಕಾಲದಲ್ಲಿ ಉಡುಪಿಯ ಪರಿಸರದಲ್ಲಿ ಪ್ರಖ್ಯಾತಿಗಳಿಸಿದ್ದ “ರಂಗಭೂಮಿ” ಆರ್ಕೆಸ್ಟ್ರಾ ತಂಡವನ್ನು ಮುನ್ನಡೆಸಿದ್ದರು. ಹಲವು ಬಾರಿ ರಂಗಭೂಮಿಯ ನಾಟಕ ಸ್ಪರ್ಧೆಗೆ ತೀರ್ಪುಗಾರರಾಗಿದ್ದರು.

ಈ ಹಿಂದೆ ಎಲ್‌ಐಸಿ ಯ ಉದ್ಯೋಗಿಯಾಗಿದ್ದು, ನಿವೃತ್ತ ಜೀವನ ನಡೆಸುತ್ತಿದ್ದರು. ಬಹಳಷ್ಟು ಜನರನ್ನು ಸಂಗೀತ ಕ್ಷೇತ್ರಕ್ಕೆ ತಂದು ಮುನ್ನಡೆಸುತ್ತಿದ್ದರು.

ಮೃತರ ಅಂತ್ಯ ಸಂಸ್ಕಾರದ ವಿಧಿವಿಧಾನವು ಇಂದು ಬೆಳಗ್ಗೆ 10ಕ್ಕೆ ಕಡಿಯಾಳಿ ಕಟ್ಟೆ ಆಚಾರ್ಯ ಮಾರ್ಗದಲ್ಲಿ ಇರುವ ಅವರ ಮನೆಯಲ್ಲಿ ನಡೆಯಲಿದೆ.
ವರದಿ:-ಉಡುಪಿ ಫಸ್ಟ್
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo