Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಮಂಗಳೂರು:- ಮಹಿಳಾ ಸಿಬ್ಬಂದಿ ಜೊತೆ ಸರ್ಕಾರಿ ವೈದ್ಯನ ಸರಸಸಲ್ಲಾಪ26-11-21

ಮಂಗಳೂರು:- ಮಹಿಳಾ ಸಿಬ್ಬಂದಿ ಜೊತೆ ಸರ್ಕಾರಿ ವೈದ್ಯನ ಸರಸಸಲ್ಲಾಪ

ಮಂಗಳೂರು ನಗರದ  ವೈದ್ಯನೊಬ್ಬ ಹಾಡಹಗಲೇ ಮಹಿಳಾ ಸಿಬ್ಬಂದಿ ಜೊತೆ ಅಶ್ಲೀಲವಾಗಿ ವರ್ತಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಆಸ್ಪತ್ರೆಯ ಮಹಿಳಾ ಸಿಬ್ಬಂದಿ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಅಷ್ಟೇ ಅಲ್ಲದೆ ಮಹಿಳಾ ಸಿಬ್ಬಂದಿ ಅವರನ್ನು ತನ್ನ ತೊಡೆ ಮೇಲೆ ಕುಳ್ಳಿರಿಸಿ ಸರಸಸಲ್ಲಾಪ ಮಾಡಿರುವ ಫೋಟೋಗೆ ಕೂಡ ವೈರಲ್ ಆಗಿದೆ.ಜೊತೆಗೆ ಮಹಿಳಾ ಸಿಬ್ಬಂದಿಗಳಿಂದ ತನ್ನ ಪಾದ ಪೂಜೆ ಮಾಡಿಸಿದ್ದಾನೆ.

ಒಂದು ವೇಳೆ ಮಹಿಳಾ ಸಿಬ್ಬಂದಿಗಳು ಈತನಿಗೆ ಸಹಕರಿಸಿದೆ ಹೋದಲ್ಲಿ ಅವರಿಗೆ ಬೆದರಿಸಿ ಟ್ರಾನ್ಸ‌ಫರ್ ಮಾಡಿಸುವ ಕಿರುಕುಳ ನೀಡುತ್ತಿದ್ದ. ಎಂದು ಮಹಿಳಾ ಸಿಬ್ಬಂದಿ ಆರೋಪಿಸಿದ್ದಾರೆ.

ಈ ಹಿಂದೆಯೇ ಒಮ್ಮೆ ಈತ ಜಿಲ್ಲಾಧಿಕಾರಿ ಕೆ.ವಿ. ರಾಜೇಂದ್ರ ಆದೇಶದಂತೆ ಸಸ್ಪೆಂಡ್ ಆಗಿದ್ದ . ಆದರೆ ಆ ಆದೇಶಕ್ಕೆ ತಡೆಯಾಜ್ಞೆ ತಂದು ಮೆತ್ತೆ ಮುಂದುವರಿದಿದ್ದನು.

ಈತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಸ್ಪತ್ರೆಯ ನೊಂದ ಮಹಿಳೆಯರು ಆಗ್ರಹಿಸಿದ್ದಾರೆ.
ವರದಿ:-ಉಡುಪಿ ಫಸ್ಟ್
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo