ಹಂಗಾರಕಟ್ಟೆ : ಬಾಳ್ಕುದ್ರು ಗ್ರಾಮದ ಶ್ರೀ ಚಿತ್ತಾರಿ ಬ್ರಹ್ಮಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ದಣಿವರಿಯದ ದಿಗ್ದರ್ಶಕ ಅವಿರತ ಯಕ್ಷಸಾಧಕ ಶ್ರೀ ಶಂಕರ ಬಾಳ್ಕುದ್ರು ಅವರ ವಿರಚಿತ ವಾತಾಪಿ ಗಣಪತಿ ಎನ್ನುವ ಯಕ್ಷಗಾನ ಕೃತಿ ಬಿಡುಗಡೆಯು ಜನರ ಸಮ್ಮುಖದಲ್ಲಿ ನಡೆಯಿತು.
ಇಂದು ಸಂಜೆ 7:30ಯ ಸುಮಾರಿಗೆ ಕೃತಿ ಬಿಡುಗಡೆ ಸಮಾರಂಭದಲ್ಲಿ ಹಟ್ಟಿಯಂಗಡಿ ಮೇಳದ ಯಜಮಾನರಾದ ರಂಜಿತ್ ಕುಮಾರ್ ಶೆಟ್ಟಿ, ಗ್ರ್ಯಾವಿಟಿ ಇಂಗ್ಲೀಷ್ ಮೀಡಿಯಮ್ ಸ್ಕೂಲ್ ಕಲ್ರಾಶಿ ಇದರ ಮುಖ್ಯೋಪಾಧ್ಯಾಯ ಮನು ಹಂದಾಡಿ, ಚೇತನಾ ಪ್ರೌಢಶಾಲೆ ಮಾಬುಕಳ ಇದರ ಮುಖ್ಯೋಪಾಧ್ಯಾಯರಾದ ಗಣೇಶ, ಕೃತಿ ನಿರ್ಮಾಪಕ ಶಂಕರ್ ಬಾಳ್ಕುದ್ರು, ಕೃತಿಗೆ ಪದ್ಯರಚನೆ ಮಾಡಿರುವ ರವಿಶಂಕರ್ ಗುಂಡ್ಮಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸ್ಥಳೀಯ ಪ್ರತಿಭೆ ಶಿವಾನಿ ಪುಜಾರಿಯವರು ನಿರೂಪಿಸಿದರು.
ನಂತರದಲ್ಲಿ ಸಿದ್ಧಿವಿನಾಯಕ ಯಕ್ಷಗಾನ ಮಂಡಳಿ ಹಟ್ಟಿಯಂಗಡಿ ಮೇಳದ ಕಲಾವಿದರ ಮುಖೇನ ವಾತಾಪಿ ಗಣಪತಿ ಯಕ್ಷಗಾನ ಪ್ರಸಂಗಗಳನ್ನು ಜನರು ಸಮ್ಮುಖದಲ್ಲಿ ಆಡಿತೋರಿಸಲಾಯಿತು.
ಇದೇ ಸಂದರ್ಭದಲ್ಲಿ ಶಂಕರ್ ಬಾಳ್ಕುದ್ರುರವರು ಕರೋನಾ ಬಾಧಿಸಿದ ಸಂದರ್ಭದಲ್ಲಿ ಹಂಗಾರಕಟ್ಟೆ ಅನೇಕ ಮಕ್ಕಳಿಗೆ ಯಕ್ಷಗಾನ ಕಲಿಸಿ ಮಾದರಿಯಾಗಿದ್ದಾರೆ. ಆ ಎಲ್ಲಾ ಮಕ್ಕಳಿಗೂ ಬಾಲ ವೇಷಧರಿಸಿ ರಂಗಕ್ಕೆ ಕರೆ ತಂದರು. ಮತ್ತು ಈ ವೇಳೆ ಮಕ್ಕಳಿಗೆ ಸ್ಮರಣಿಕೆಯನ್ನು ನೀಡಿ ಹುರಿದುಂಬಿಸಿದರು.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ