Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಉಡುಪಿ:-ಕೇರಳದಿಂದ ಬರುವವರಿಗೆ ಒಂದು ವಾರ ಕ್ವಾರಂಟೈನ್- ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.28-11-2021

ಉಡುಪಿ:-ರೂಪಾಂತರಿ ಕೊರೋನಾ ಭೀತಿ ಹಿನ್ನೆಲೆ-ಜಿಲ್ಲಾಧಿಕಾರಿ ಸಭೆ

ಇಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರ ಕಛೇರಿಯಲ್ಲಿ ಮಕ್ಕಳ ತೀವ್ರ ನಿಗಾ ಘಟಕ, ಸರ್ವೇಕ್ಷಣಾ ಕ್ರಮಗಳು, ಆಕ್ಸಿಜನ್ ಬೆಡ್ ಗಳ ಬಗ್ಗೆ ಪರಿಶೀಲನಾ ಸಭೆಯನ್ನು ನಡೆಸಲಾಯಿತು.

ಸಭೆಯಲ್ಲಿ ಕೋವಿಡ್ ರೂಪಾಂತರಿ ತಳಿಗಳಿಂದ ಹಲವಾರು ದೇಶಗಳಲ್ಲಿ ಕೋವಿಡ್ ಉಲ್ಬಣಗೊಳ್ಳುತ್ತಿರುವ ಜತೆಗೆ ರಾಜ್ಯದಲ್ಲಿಯೂ ಕೆಲವೊಂದು ಕಾಲೇಜು ಮತ್ತು ವಸತಿ ಶಾಲೆಗಳಲ್ಲಿ ಹೆಚ್ಚು ಪ್ರಕರಣಗಳು ವರದಿಯಲಾಗುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗಿರುವುದರಿಂದ ಪ್ರಸ್ತುತ ಪ್ರತಿದಿನ 1500 ರಿಂದ 2000 ಕೋವಿಡ್ ಪರೀಕ್ಷೆಗಳಾಗುತ್ತಿದ್ದು ಇನ್ನು ಮುಂದೆ ಪ್ರತಿದಿನ ಕನಿಷ್ಟ 4000 ಪರೀಕ್ಷೆ ಮಾಡುವಂತೆ ತಿಳಿಸಲಾಯಿತು.

ಕೇರಳದಿಂದ ಬರುವವರನ್ನು ಕಡ್ಡಾಯವಾಗಿ ಪರೀಕ್ಷೆಗೊಳಪಡಿಸಿ ಒಂದು ವಾರ ಕ್ವಾರಂಟೈನ್ನಲ್ಲಿಡುವಂತೆ ಸೂಚಿಸಲಾಯಿತು. ವಿದೇಶಗಳಲ್ಲಿಂದ ಬರುವವರನ್ನು ಮತ್ತು ರೋಗ ಲಕ್ಷಣವಿರುವವರನ್ನು, ಐ.ಎಲ್.ಐ, ಎಸ್.ಎ.ಆರ್.ಐ ಪ್ರಕರಣಗಳನ್ನು,ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಹಾಸ್ಟೆಲ್, ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಕೋವಿಡ್ ಪರೀಕ್ಷೆಗೆ ಮಾಡಿಸಿಕೊಳ್ಳುವಂತೆ ಸಲಹೆ ನೀಡುವಂತೆ ಸೂಚಿಸಲಾಯಿತು.

ಪ್ರಾಥಮಿಕ ಸಂಪರ್ಕಿಗಳ ಮತ್ತು ದ್ವಿತೀಯ ಹಂತದ ಸಂಪರ್ಕಿಗಳನ್ನು ಸಹ ಕೋವಿಡ್ ಪರೀಕ್ಷೆಗೆ ಒಳಪಡಿಸುವಂತೆ ಸೂಚಿಸಲಾಯಿತು. ಆಕ್ಸಿಜನ್ ಬೆಡ್ಗಳ ಸಂಖ್ಯೆ ಹೆಚ್ಚಿಸುವಂತೆ, ಮಕ್ಕಳ ತೀವ್ರ ನಿಗಾ ಘಟಕಕ್ಕೆ ಅಗತ್ಯವಿರುವ ಉಪಕರಣಗಳನ್ನು ಸ್ಥಳೀಯವಾಗಿ ಸಂಘ ಸಂಸ್ಥೆಗಳನ್ನು ಸಂಪರ್ಕಿಸಿ ಸಿ.ಎಸ್.ಆರ್ ನಿಧಿಯಿಂದ ಅನುದಾನವನ್ನು ಪಡೆಯಲು ಕ್ರಮವಹಿಸುವಂತೆ ತಿಳಿಸಲಾಯಿತು.

ಎಲ್ಲಾ ಖಾಸಗಿ ಕ್ಲಿನಿಕ್ ಮತ್ತು ಆಸ್ಪತ್ರೆಗಳಲ್ಲಿ ಎಲ್ಲಾ ಐ.ಎಲ್.ಐ/ ಎಸ್.ಎ.ಆರ್.ಐ ಪ್ರಕರಣಗಳನ್ನು ವರದಿ ಮಾಡುವಂತೆ ವರದಿ ಮಾಡದ ಆಸ್ಪತೆಗಳಿಗೆ ನೋಟೀಸು ನೀಡಿ ದಂಡ ಹಾಕುವ ಬಗ್ಗೆ ಕ್ರಮ ಕೈಗೊಳ್ಳುವಂತೆ ತಿಳಿಸಲಾಯಿತು. ಲಸಿಕಾರಣವನ್ನು ಹೆಚ್ಚಿಸುವ ಬಗ್ಗೆ ಸಮಾಜದ ಪ್ರಮುಖರ ಸಭೆ ಕರೆಯುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ವರದಿ:-ಉಡುಪಿ ಫಸ್ಟ್
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo