ಬೈಂದೂರು: ದುಶ್ಚಟಗಳಿಗೆ ದಾಸರಾಗಿ ಜೀವನ ಹಾಳು ಮಾಡಿಕೊಳ್ಳಬೇಡ ಎಂದು ಬುದ್ಧಿವಾದ ಹೇಳಿದಕ್ಕೆ ಯುವಕನೋರ್ವ ಸಂಬಂಧಿಕರ ಮೇಲೆಯೆ ಹಲ್ಲೆ ನಡೆಸಿದ ಘಟನೆ ಬೈಂದೂರಿನ ನಾವುಂದ ಗ್ರಾಮದಲ್ಲಿ ನಡೆದಿದೆ.
ಸಬೀನಾ ಬಾನು ಅವರ ಪತಿಯ ಸಹೋದರಿ ಸಬಿಕಾರವರ ಮಗ ಸಿಯಾಬ್ ತನೊನ ಸ್ನೇಹಿತರ ಜೊತೆ ಸೇರಿಕೊಂಡು ಮದ್ಯಪಾನ ಮತ್ತಿತರ ಮಾದಕ ವಸ್ತುಗಳನ್ನು ಸೇವನೆ ಮಾಡಿಕೊಂಡು ಮನೆಗೆ ಬಂದು ಮನೆಯಲ್ಲೇ ಸಿಗರೇಟು ಸೇದಿಕೊಂಡು ಗಲಾಟೆ ಮಾಡುತ್ತಿದ್ದ. ಈ ನಿಮಿತ್ತ ಸಬೀನಾ ಬಾನು ಮತ್ತವರ ಪತಿ ಸಿಯಾಬ್ ಗೆ ಬುದ್ಧಿವಾದ ಹೇಳಿದ್ದರು. ಈ ಪ್ರಕರಣದ ಕುರಿತು ಸಬೀನಾ ಸದ್ಯ ಪೋಲಿಸರಿಗೆ ದೂರು ನೀಡಿದ್ದಾರೆ.
ನವೆಂಬರ್ 7 ರಂದು ಬೆಳಿಗ್ಗೆ ಸಿಯಾಬ್ ಮತ್ತು ಆತನ ಸ್ನೇಹಿತ ಇಸಾಕ್ ಎಂಬಾತ ನಾಲ್ಕು ಮಂದಿ ಸೇರಿಕೊಂಡು ಮನೆಯ ಒಳಗೆ ತಲವಾರಿನೊಂದಿಗೆ ಅಕ್ರಮವಾಗಿ ಪ್ರವೇಶಿಸಿ ನಾನು ಏನನ್ನೂ ಬೇಕಾದರೂ ಮಾಡುತ್ತೇನೆ ಅದನ್ನು ಕೇಳೊಕೆ ನೀನು ಯಾರು ಎಂದು ದೂರು ನೀಡಿದವರ ವಿರುದ್ಧ ಜೊತೆಗೆ ಅವರ ಪತಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾನೆ. ಅಲ್ಲದೆ ಜೀವಬೆದರಿಕೆಯನ್ನೊಡ್ಡಿದ್ದಾನೆ.
ಮನೆಯ ಒಳಗೆ ಗಲಾಟೆ ನಡೆಯುತ್ತಿರುವ ವೇಳೆಯಲ್ಲಿ ನೆರೆಕೆರೆ ನಿವಾಸಿಗಳು ಮನೆಗೆ ದಾವಿಸುತ್ತಿರುವ ಸಂದರ್ಭದಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಪೋಲಿಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಪೈಕಿ ಪೋಲಿಸರಿಗೆ ಸಂಬಂದಿಕರು ನೀಡಿದ ದೂರಿನಂತೆ ಬೈಂದೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡು ತನಿಖೆ ಚುರುಕುಗೊಂಡಿದೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ