ಹಂಗಾರಕಟ್ಟೆ: ಮೀನು ವ್ಯಾಪಾರದ ಹಿನ್ನೆಲೆಯಲ್ಲಿ ಕೋಟಿಗಟ್ಟಲೆ ಸಾಲ ಮಾಡಿಕೊಂಡು ತೀರಿಸಲಾಗದೆ ಬುಧವಾರ ಸಂಜೆ ಮನನೊಂದು ಮೀನಿನ ವ್ಯಾಪಾರಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಬುಕಳ ವ್ಯಾಪ್ತಿಯ ಐರೋಡಿ ಗ್ರಾಮದ ದಂಡೆಬೆಟ್ಟುವಿನ ಸೀತಾನದಿ ಸಮೀಪದ ಹಾಡಿಯಲ್ಲಿ ನಡೆದಿದೆ.
ಮೃತರ ಪೈಕಿ ಸುರೇಶ ಪುತ್ರನ್(47) ಎಂಬವರು ಹಂಗಾರಕಟ್ಟೆ ಬಂದರಿನ ಸಮೀಪ ಅಂಗಡಿಯನ್ನು ಪರವಾನಿಗೆ ಪಡೆದು ಮೀನಿನ ವಹಿವಾಟು ನಡೆಸುತಿದ್ದರು. ಈ ಸಂದರ್ಭದಲ್ಲಿ ಅಂಗಡಿ ಮಾಲಿಕನಿಗೆ ಕೆಲ ತಿಂಗಳ ಬಾಡಿಗೆ ನೀಡಿಲ್ಲದಿರುವುದು ತಿಳಿದುಬಂದಿದೆ. ಜೊತೆಗೆ ಒರ್ವ ಮಹಿಳೆಗೆ ಮೀನಿಗೆ ಸಂಬಂಧಿಸಿ ಲಕ್ಷಕಟ್ಟಲೆ ಸಾಲ ಮಾಡಿಕೊಂಡಿದ್ದು ಬೆಳಕಿಗೆ ಬಂದಿದೆ.
ಹೀಗೆ ಅವರು ವ್ಯವಹಾರಕ್ಕೆ ಸಂಬಂಧಿಸಿದಂತೆ ವಿವಿಧ ಕಡೆಗಳಲ್ಲಿ ಕೈ ಸಾಲ ಮಾಡಿಕೊಂಡಿದ್ದರು. ವ್ಯವಹಾರದಲ್ಲಿ ತೀರಾ ನಷ್ಟ ಅನುಭವಿಸುತ್ತಿದ್ದ ಕಾರಣ ಸಾಲದ ಹೊರೆ ಜಾಸ್ತಿಯಾಗಿ ಸಾಲವನ್ನು ಸರಿಯಾದ ಸಮಯಕ್ಕೆ ತೀರಿಸಲಾಗದ ಚಿಂತೆಯಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ದಂಡೆಬೆಟ್ಟು ಸೀತಾನದಿಯ ಸಮೀಪ ನವೆಂಬರ್ 9ರ ಸಂಜೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಆತ್ಮಹತ್ಯೆಯ ಕುರಿತು ಮೃತರ ತಮ್ಮ ಚಂದ್ರ ಪುತ್ರನ್ ಅವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗೊಂಡು ತನಿಖೆ ನಡೆಯುತ್ತಿದೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ