ಮಲ್ಪೆ : ಜಿಲ್ಲೆಯ ಮಲ್ಪೆ ಮೀನುಗಾರಿಕ ಬಂದರಿನ ಮಂಜುದಕ್ಕೆಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಆಂದ್ರಪ್ರದೇಶ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ಮೃತನ ಪೈಕಿ ಆಂಧ್ರಪ್ರದೇಶ ಮೂಲದ ಗರಿಕನ ಧನಯ್ಯ (46) ಮೃತಪಟ್ಟವರು ಎಂದು ತಿಳಿದುಬಂದಿದೆ. ನವೆಂಬರ್ 9 ರಂದು ಸ್ಥಳೀಯ ಮಂಜುಕೊಳ ಅವರು ಈಶ್ವರ ಪುತ್ರನ್ ಅವರಿಗೆ ಕರೆ ಮಾಡಿ ಮಲ್ಪೆ ಬಂದರಿನ ಮಂಜು ದಕ್ಕೆಯ ಬಾರ್ಜ್ ಬಳಿ ವ್ಯಕ್ತಿಯೊಬ್ಬರು ನೀರಿಗೆ ಬಿದ್ದಿರುವ ಬಗ್ಗೆ ಮಾಹಿತಿ ನೀಡಿದ್ದರು.
ಬಳಿಕ ಈಶ್ವರ್ ಪುತ್ರನವರು ಸ್ಥಳಕ್ಕೆ ತೆರಳಿ ನೀರಿನಲ್ಲಿ ಮುಳುಗಿ ಹುಡುಕಾಡಿದಾಗ ದಕ್ಕೆಯ ಬಾರ್ಜ್ ನ ತಳಭಾಗದಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿತ್ತು. ಮೃತ ವ್ಯಕ್ತಿಯು ಧರಿಸಿದ್ದ ಬಟ್ಟೆಯ ಕಿಸೆಯಲ್ಲಿದ್ದ ಆಧಾರ ಕಾರ್ಡ್ ನ ಆಧಾರದಲ್ಲಿ ಮೃತನ ಗುರುತು ಪತ್ತೆ ಹಚ್ಚಲಾಗಿದೆ.
ಅದರಂತೆ ಗರಿಕನ ಧನಯ್ಯ ಅವರು ಮೀನುಗಾರಿಕಾ ಬೋಟಿನಲ್ಲಿ ಇರುವಾಗ ಆಕಸ್ಮಿಕವಾಗಿ ಕಾಲು ಜಾರಿ ಅಥವಾ ಯಾವುದೋ ಕಾರಣದಿಂದ ಕಾಲು ಜಾರಿ ಮಂಜು ಧಕ್ಕೆ ನೀರಿಗೆ ಬಿದ್ದು ಮುಳುಗಿ ಮೃತಪಟ್ಟಿರುವುದಾಗಿ ಘಟನೆ ಸಂಭವಿಸಿದೆ.
ಈ ಪ್ರಕರಣದ ಕುರಿತು ಈಶ್ವರ್ ಪುತ್ರನ್ ಅವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ