ಕುಂದಾಪುರದಿಂದ ಉಡುಪಿ, ಮಣಿಪಾಲ ಕಡೆಗೆ: ಜ.17ರಂದು ಸಂಜೆ 7:00ರಿಂದ ಕುಂದಾಪುರ, ಬ್ರಹ್ಮಾವರ ಮಾರ್ಗವಾಗಿ ಉಡುಪಿ ನಗರಕ್ಕೆ ಬರುವ ಎಲ್ಲಾ ವಾಹನಗಳು ಅಂಬಾಗಿಲು ಮೂಲಕ ರಾ.ಹೆ.66 ರಲ್ಲಿ ಕರಾವಳಿ ಜಂಕ್ಷನ್ ತಲುಪಿ ಬನ್ನಂಜೆ ಮಾರ್ಗವಾಗಿ ಉಡುಪಿ ಸಿಟಿ, ಸರ್ವಿಸ್ ಬಸ್‌ನಿಲ್ದಾಣಕ್ಕೆ ಪ್ರವೇಶಿಸಬೇಕು. ಸಂಜೆ 7ರಿಂದ ಮರುದಿನ ಬೆಳಗ್ಗೆ 7ರವರೆಗೆ ಕುಂದಾಪುರದಿಂದ ಉಡುಪಿ ನಗರಕ್ಕೆ ಆಗಮಿಸುವ ಎಲ್ಲಾ ವಾಹನಗಳ ನಗರ ಪ್ರವೇಶವನ್ನು ನಿಷೇಧಿಸಲಾಗಿದ್ದು, ಅವುಗಳಿಗೆ ಕರಾವಳಿ ಜಂಕ್ಷನ್ ಅಂತಿಮ ನಿಲುಗಡೆಯಾಗಿದೆ. ಕರಾವಳಿ ಜಂಕ್ಷನ್‌ನಲ್ಲಿ ಪ್ರಯಾಣಿಕರನ್ನು ಇಳಿಸಿ, ಅಲ್ಲಿಂದಲೇ ಪ್ರಯಾಣಿಕರನ್ನು ಕರೆದುಕೊಂಡು ವಾಪಾಸು ನಿಟ್ಟೂರು, ಅಂಬಾಗಿಲು, ಸಂತೆಕಟ್ಟೆ ಮೂಲಕ ಕುಂದಾಪುರ ಕಡೆಗೆ ಹೋಗಬೇಕು. ಮಣಿಪಾಲಕ್ಕೆ ಹೋಗುವ ವಾಹನಗಳು ಅಂಬಾಗಿಲು ಮೂಲಕ ಪೆರಂಪಳ್ಳಿ ರಸ್ತೆಯ ಮೂಲಕ ಕಾಯಿನ್ ಸರ್ಕಲ್, ಸಿಂಡಿಕೇಟ್ ಸರ್ಕಲ್ ಮಾರ್ಗವಾಗಿ ಮಣಿಪಾಲ, ಕಾರ್ಕಳಕ್ಕೆ ತೆರಳಬೇಕು.
ಉಡುಪಿ ನಗರಕ್ಕೆ ಕುಕ್ಕಿಕಟ್ಟೆ, ಮೂಡುಬೆಳ್ಳೆ, ಅಲೆವೂರು, ಕೊರಂಗ್ರಪಾಡಿ, ಬೈಲೂರು ಕಡೆಗಳಿಗೆ ಹೋಗುವ ಮತ್ತು ಬರುವ ವಾಹನಗಳು ಜ.17 ರಂದು ಸಂಜೆ 7:00ರವರೆಗೆ ಚಿಟ್ಪಾಡಿ, ಬೀಡಿನಗುಡ್ಡೆ, ಶಾರದ ಕಲ್ಯಾಣ ಮಂಟಪ, ಕಲ್ಸಂಕ ಮಾರ್ಗವಾಗಿ ಉಡುಪಿ ಸಿಟಿ, ಸರ್ವಿಸ್ ಬಸ್‌ನಿಲ್ದಾಣಕ್ಕೆ ಬರಬೇಕು. ಉಡುಪಿ ನಗರಕ್ಕೆ ಸಂಜೆ 7ರಿಂದ ಮರುದಿನ ಬೆಳಗ್ಗೆ 7ರವರೆಗೆ ಎಲ್ಲಾ ವಾಹನ ಗಳ ಪ್ರವೇಶವನ್ನು ನಿಷೇಧಿಸಲಾಗಿದೆ. ಸಂಜೆ 7ರಿಂದ ಬೆಳಗ್ಗೆ 7ರವರೆಗೆ ಬೀಡಿನಗುಡ್ಡೆ, ಚಿಟ್ಪಾಡಿ ಮೂಲಕ ಮಿಷನ್‌ಕಂಪೌಡ್ ರಸ್ತೆ ಅಂತಿಮ ನಿಲುಗಡೆ ಯಾಗಿದ್ದು, ಅಲ್ಲಿಂದಲೇ ವಾಪಾಸು ಹಿಂದಿರುಗಬೇಕು.
ಕಾರ್ಕಳ-ಮಣಿಪಾಲ ಕಡೆಯಿಂದ ಉಡುಪಿಗೆ: ಬರುವ ವಾಹನಗಳು ಜ.17 ರ ಸಂಜೆ 7 ಗಂಟೆಯವರೆಗೆ ನೇರವಾಗಿ ಕಲ್ಸಂಕ ಮಾರ್ಗವಾಗಿ ಉಡುಪಿ ಸಿಟಿ, ಸರ್ವಿಸ್ ಬಸ್‌ನಿಲ್ದಾಣ ಪ್ರವೇಶಿಸಬೇಕು. ಉಡುಪಿ ನಗರಕ್ಕೆ ಸಂಜೆ 7ರಿಂದ ಮರುದಿನ ಬೆಳಗ್ಗೆ 7ರವರೆಗೆ ಎಲ್ಲಾ ವಾಹನಗಳ ಪ್ರವೇಶವನ್ನು ನಿಷೇಧಿಸ ಲಾಗಿದೆ. ಸಂಜೆ 7ರಿಂದ ಬೆಳಗ್ಗೆ 7ರವರೆಗೆ ಮಣಿಪಾಲ, ಸಿಂಡಿಕೇಟ್ ಸರ್ಕಲ್ ನಿಂದ ಕಾಯಿನ್ ಸರ್ಕಲ್, ಪೆರಂಪಳ್ಳಿ, ಅಂಬಾಗಿಲು, ನಿಟ್ಟೂರು ಮಾರ್ಗವಾಗಿ ಕರಾವಳಿ ಜಂಕ್ಷನ್‌ಗೆ ಆಗಮಿಸಬೇಕು.ಅದು ಅಂತಿಮ ನಿಲುಗಡೆಯಾಗಿದೆ. ಮತ್ತೆ ಅಲ್ಲಿಂದಲೇ ಪ್ರಯಾಣಿಕರನ್ನು ಕರೆದುಕೊಂಡು ವಾಪಾಸು ನಿಟ್ಟೂರು, ಅಂಬಾ ಗಿಲು, ಪೆರಂಪಳ್ಳಿ ಮಾರ್ಗವಾಗಿ ಮಣಿಪಾಲ, ಕಾರ್ಕಳ ಕಡೆಗೆ ಹೋಗಬೇಕು.
ಮಂಗಳೂರು-ಮುಂಬೈ-ಬೆಂಗಳೂರಿಗೆ ಹೋಗುವ ವಾಹನಗಳು: ಜ.17 ರಂದು ಸಂಜೆ 7 ಗಂಟೆಯವರೆಗೆ ಮಂಗಳೂರಿನಿಂದ ಮುಂಬೈ ಕಡೆಗೆ ಮತ್ತು ಬೆಂಗಳೂರಿಗೆ ಹೋಗುವ ಎಲ್ಲಾ ಖಾಸಗಿ, ಕೆಎಸ್ಸಾರ್ಟಿಸಿ ಬಸ್ಸುಗಳು ಬಲೈಪಾದೆ, ಅಂಬಲಪಾಡಿ, ಕರಾವಳಿ ಜಂಕ್ಷನ್, ಬನ್ನಂಜೆ, ಸಿಟಿ ಬಸ್‌ನಿಲ್ದಾಣ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಬಂದು ಪ್ರಯಾಣಿಕರನ್ನು ಕರೆದುಕೊಂಡು ಅದೇ ಮಾರ್ಗವಾಗಿ ಪ್ರಯಾಣವನ್ನು ಮುಂದುವರೆಸಬೇಕು. ಉಡುಪಿ ನಗರಕ್ಕೆ ಸಂಜೆ 7 ಗಂಟೆಯಿಂದ ಮರುದಿನ ಬೆಳಗ್ಗೆ 7ರವರೆಗೆ ಎಲ್ಲಾ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ. ಸಂಜೆ 7ರಿಂದ ಬೆಳಗ್ಗೆ 7ರವರೆಗೆ ಮುಂಬೈ, ಬೆಂಗಳೂರಿಗೆ ಹೋಗುವ ಎಲ್ಲಾ ಖಾಸಗಿ, ಕೆಎಸ್ಸಾರ್ಟಿಸಿ ಬಸ್‌ಗಳು ಕರಾವಳಿ ಜಂಕ್ಷನ್‌ನಿಂದಲೇ ಎರಡೂ ಬದಿಯ ಸರ್ವಿಸ್ ರಸ್ತೆಯಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಮುಂಬೈ ಹಾಗೂ ಬೆಂಗಳೂರಿಗೆ ಪ್ರಯಾಣ ಮುಂದುವರೆಸಬೇಕು.
ಮಲ್ಪೆಯಿಂದ ಉಡುಪಿಗೆ ಬರುವ ವಾಹನಗಳು: ಜ.17ರಂದು ಸಂಜೆ 6 ಗಂಟೆಯವರೆಗೆ ಮಲ್ಪೆಯಿಂದ ಬರುವ ಎಲ್ಲಾ ಬಸ್ಸುಗಳು ಆದಿಉಡುಪಿ, ಕರಾವಳಿ ಜಂಕ್ಷನ್, ಬನ್ನಂಜೆ ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸಬೇಕು. ಆದರೆ ಸಂಜೆ 7ರಿಂದ ಮರುದಿನ ಬೆಳಗ್ಗೆ 7ರವರೆಗೆ ಎಲ್ಲಾ ವಾಹನಗಳ ಪ್ರವೇಶ ವನ್ನು ನಿಷೇಧಿಸಲಾಗಿದ್ದು, ಸಂಜೆ 7ರಿಂದ ಬೆಳಗ್ಗೆ 7ರವರೆಗೆ ಮಲ್ಪೆ ಕಡೆಯಿಂದ ಬರುವ ಎಲ್ಲಾ ವಾಹನಗಳು ಆದಿಉಡುಪಿ ಜಂಕ್ಷನ್‌ವರೆಗೆ ಬಂದು ನಂತರ ಅದೇ ಮಾರ್ಗದಲ್ಲಿ ಮಲ್ಪೆ ಕಡೆಗೆ ಹಿಂದಿರುಗಬೇಕು. ಮಂಗಳೂರು, ಕುಂದಾಪುರ ಕಡೆಗೆ ಹೋಗುವ ವಾಹನಗಳು ಕರಾವಳಿ ಜಂಕ್ಷನ್ ಮೂಲಕ ಹಾದು ಹೋಗಬೇಕು.
ವಾಹನ ನಿಲುಗಡೆ ನಿಷೇಧ: ಜ.17ರಂದು ಅಪರಾಹ್ನ 2:00ರಿಂದ ಜ.18ರ ಬೆಳಗ್ಗೆ 7:00ಗಂಟೆಯವರೆಗೆ ಈ ಕೆಳಗಿನ ಸ್ಥಳಗಳಲ್ಲಿ ಎಲ್ಲಾ ಮಾದರಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.
ಅಂಬಲಪಾಡಿಯಿಂದ ಜೋಡುಕಟ್ಟೆಯವರೆಗೆ ಎರಡೂ ಬದಿಯಲ್ಲಿ ಎಲ್ಲಾ ರೀತಿಯ ವಾಹನಗಳನ್ನು, ಬ್ರಹ್ಮಗಿರಿಯಿಂದ ಬನ್ನಂಜೆವರೆಗೆ, ಲಯನ್ ಸರ್ಕಲ್ ನಿಂದ ಮಿಷನ್ ಕಂಪೌಂಡ್‌ವರೆಗೆ, ಬೇತಲ್ ಚರ್ಚ್‌ನಿಂದ ಸಿಂಡಿಕೇಟ್ ಸರ್ಕಲ್‌ವರೆಗೆ, ಸಿಂಡಿಕೇಟ್ ಸರ್ಕಲ್‌ನಿಂದ ತ್ರಿವೇಣಿ ಜಂಕ್ಷನ್‌ವರೆಗೆ, ಹನುಮಾನ್ ಜಂಕ್ಷನ್‌ನಿಂದ ಸಂಸ್ಕೃತ ಕಾಲೇಜ್ ಜಂಕ್ಷನ್, ಕನಕದಾಸ ರಸ್ತೆಯ ಪಲಿಮಾರು ಮಠದ ಗೇಟ್‌ವರೆಗೆ, ಸಿಟಿ ಸೆಂಟರ್‌ನಿಂದ ಚಿತ್ತರಂಜನ್ ಸರ್ಕಲ್, ಮಿತ್ರಾ ಆಸ್ಪತ್ರೆ ರಸ್ತೆ ತನಕ, ಐಡಿಯಲ್ ಜಂಕ್ಷನ್, ಎಲ್‌ವಿಟಿ ತೆಂಕಪೇಟೆ ದೇವಸ್ಥಾನ, ಪಿ.ಪಿ.ಸಿ ಕಾಲೇಜ್ ತನಕ, ಐಡಿಯಲ್ ಜಂಕ್ಷನ್‌ನಿಂದ ಹರಿಶ್ಚಂದ್ರ ಮಾರ್ಗ, ವಿದ್ಯೋದಯ ಶಾಲೆಯವರೆಗೆ, ಕಲ್ಸಂಕದಿಂದ ರಾಜಾಂಗಣ ಪಾರ್ಕಿಂಗ್ ಸ್ಥಳದವರೆಗೆ, ಓಶಿಯನ್ ಪರ್ಲ್ ಹೋಟೆಲ್‌ನಿಂದ ಕಟ್ಟೆ ಆಚಾರ್ಯ ಮಾರ್ಗ, ಮಥುರಾ ಹೋಟೆಲ್ ತನಕ, ಉಡುಪಿ ಶ್ರೀಕೃಷ್ಣ ಮಠದ ರಥಬೀದಿಯಲ್ಲಿ ಯಾವುದೇ ವಾಹನ ಪ್ರವೇಶ ಮತ್ತು ನಿಲುಗಡೆಯನ್ನು ನಿಷೇಧಿಸಲಾಗಿದೆ. ಪೇಜಾವರ ಮಠದ ಹಿಂಭಾಗದಲ್ಲಿ ಲಘು ಹಾಗೂ ದ್ವಿಚಕ್ರ ವಾಹನ ನಿಲುಗಡೆ ಮಾಡುತ್ತಿದ್ದು, ವುಡ್‌ಲ್ಯಾಂಡ್ ಹೋಟೆಲ್‌ನಿಂದ ಪೇಜಾವರ ಮಠದ ಹಿಂಭಾಗದವರೆಗೆ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.
ಜ.17ರ ಬೆಳಗ್ಗೆ 9:00 ಗಂಟೆಯಿಂದ ಜ.18ರ ಬೆಳಗ್ಗೆ 7 ಗಂಟೆಯವರೆಗೆ ಹೆಚ್ಚುವರಿಯಾಗಿ ಸ್ವಾಗತಗೋಪುರ, ಕಿನ್ನಿಮೂಲ್ಕಿ, ಗೋವಿಂದಕಲ್ಯಾಣ ಮಂಟಪ, ಜೋಡುಕಟ್ಟೆ ಲಯನ್‌ಸರ್ಕಲ್, ಡಯಾನ ಸರ್ಕಲ್, ಮಿತ್ರಜಂಕ್ಷನ್, ಐಡಿಯಲ್ ಜಂಕ್ಷನ್, ತೆಂಕಪೇಟೆ ರಸ್ತೆಯ ಎರಡೂ ಬದಿಯಲ್ಲಿ ವಾಹನ ಸಂಚಾರ ಹಾಗೂ ವಾಹನ ನಿಲುಗಡೆಯನ್ನು ನಿಷೇಧಿಲಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ