ಉಡುಪಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಹಿಜಾಬ್ ವಿವಾದ ಇದೀಗ ರಾಷ್ಟ್ರ ಮಟ್ಟದಲ್ಲಿ ಚರ್ಚೆ ಆಗುತ್ತಿದ್ದು, ಇಂದು ಕಾಲೇಜಿಗೆ ಹಿಂದೂ ಜಾಗರಣಾ ವೇದಿಕೆ ಭೇಟಿ ನೀಡಿದೆ.
ಒಂದು ವೇಳೆ ಸರ್ಕಾರ ಶಾಲೆ ಕಾಲೇಜಿನಲ್ಲಿ ಸಮವಸ್ತ್ರ, ಬದಲು ಹಿಜಾಬ್ ಬುರ್ಖಾಗೆ ಅವಕಾಶ ನೀಡಿದರೆ ಮುಂದೆ ಶರಿಯತ್ ಕಾನೂನು ಕೇಳುತ್ತಾರೆ ಅದಕ್ಕೂ ಅನುಮತಿ ಕೊಡುತ್ತೀರಾ ಎಂದು ಸರ್ಕಾರಕ್ಕೆ ಹಿಂದೂ ಜಾಗರಣೆ ವೇದಿಕೆ ಪ್ರಶ್ನೆ ಮಾಡಿದೆ.
ಹಿರಿಯ ಅಧಿಕಾರಿಗಳು ಪ್ರಾಂಶುಪಾಲರಿಗೆ ಒತ್ತಡ ಹಾಕುತ್ತಿರುವ ಬಗ್ಗೆ ಸಂಘಟನೆ ಗಮನಕ್ಕೆ ಬಂದಿದೆ. ಸರ್ಕಾರ, ಇಲಾಖೆ ಮೂಲಭೂತ ಮತೀಯ ಸಂಘಟನೆಗೆ ಬೆಂಬಲ ನೀಡಿದರೆ ನಾವು ಸಹಿಸಲ್ಲ. ಮುಸಲ್ಮಾನ ವಿದ್ಯಾರ್ಥಿಗಳು ಇಷ್ಟು ವರ್ಷ ಇಲ್ಲದ ವಿವಾದ ಶುರು ಮಾಡಿದ್ದಾರೆ. ನೂರು ಮುಸಲ್ಮಾನ ಹೆಣ್ಮಕ್ಕಳಲ್ಲಿ ಎಂಟು ಮಂದಿಯದ್ದು ಮಾತ್ರವಲ್ಲ ತಕರಾರು, ಶಿಕ್ಷಣಕ್ಕೆ ಧಾರ್ಮಿಕತೆ ಬೆರೆಸಿದರೆ ಇದು ಸರಿಯಲ್ಲ ಎಂದಿದೆ.
ಒಂದು ವೇಳೆ ಸರ್ಕಾರ ಹಿಜಾಬ್ ಧರಿಸಲು ಅನುಮತಿ ನೀಡಿದರೆ, ಉಡುಪಿ ಜಿಲ್ಲೆಯ ಎಲ್ಲಾ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬರುತ್ತಾರೆ ಎಂದು ಹಿಂದೂ ಜಾಗರಣ ವೇದಿಕೆ ತಿಳಿಸಿದೆ.
ವರದಿ:-ಉಡುಪಿ ಫಸ್ಟ್.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ