Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಮಣಿಪಾಲ:-ಒ.ಎಲ್.ಎಕ್ಸ್‌ನಲ್ಲಿ ಯುವತಿಗೆ ವಂಚನೆ ದೂರು ದಾಖಲು22-1-2022

ಉಡುಪಿ : ಜಿಲ್ಲೆಯಲ್ಲಿ ಯುವತಿಯೊಬ್ಬರು ಒ.ಎಲ್‌ ಎಕ್ಸ್‌.ನಲ್ಲಿ ಕಿವಿಯೋಲೆ ಮಾರಾಟ ಮಾಡಲು ಹೋಗಿ 93000ರೂ., ಹಣ ಕಳೆದುಕೊಂಡಿರುವ ಬಗ್ಗೆ ಸೆನ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಘಟನೆಯ ಕುರಿತಂತೆ ಮಣಿಪಾಲ, ಸೋನಿಯ ಹಾಸ್ಟೆಲ್‌ ನಿವಾಸಿ ಖುಷಿ ಮೆಹ್ತಾ ಅವರು ಒ.ಎಲ್‌.ಎಕ್ಸ್‌ ನಲ್ಲಿ ಕಿವಿ ಯೋಲೆ ಮಾರಾಟ ಮಾಡುವ ಜಾಹೀರಾತು ನೀಡಿದ್ದರು.

ಕಿವಿಯೋಲೆಯನ್ನು ಅಪರಿಚಿತ ವ್ಯಕ್ತಿ ಕರೆ ಮಾಡಿ ಖರೀದಿಸುವುದಾಗಿ ತಿಳಿಸಿದ್ದಾರೆ. ಯುವತಿಗೆ ಮೊದಲು 100 ರೂ. ಹಣವನ್ನು ಪೇಟಿಎಂ ಮೂಲಕ ಪಾವತಿಸಿದ್ದಾರೆ.

ಅನಂತರ ಯುವತಿ ಖಾತೆಯಿಂದಲೇ 19,018 ರೂ. ಕಡಿತಗೊಂಡಿದೆ. ಈ ಬಗ್ಗೆ ಯುವತಿ ಆತನಿಗೆ ಕರೆ ಮಾಡಿ ವಿಚಾರಿಸಿದಾಗ ಹಣ ಮರುಪಾವತಿ ಮಾಡುವುದಾಗಿ ನಂಬಿಸಿ, ಬೇರೆ ಯಾವುದಾದರು ಖಾತೆ ವಿವರವನ್ನು ಒದಗಿಸುವಂತೆ ಹೇಳಿದ್ದಾನೆ.

ಇದನ್ನೂ ನಂಬಿದ ಯುವತಿ ಸ್ನೇಹಿತೆ ಸಾಯಿ ಚಂದನ್‌ ಎಂಬವರ ಮೊಬೈಲ್‌ ನಂಬರ್‌ ನೀಡುತ್ತಾರೆ. 

ಅನಂತರ ಅಪರಿಚಿತ ವ್ಯಕ್ತಿ ಸಾಯಿ ಚಂದನ್‌ಗೆ ಬಂದಿರುವ ಒ.ಟಿ.ಪಿ ವಿವರ ತಿಳಿಸುವಂತೆ ಹೇಳಿದ್ದು, ಸ್ನೇಹಿತೆಯ ಖಾತೆಯಿಂದಲೂ ಹಂತ ಹಂತವಾಗಿ ಒಟ್ಟು 74,800 ರೂ.ಹಣ ಲಪಟಾಯಿಸಿದ್ದಾನೆ.

ಹೀಗೆ ಕಿವಿಯೋಲೆ ಖರೀದಿಸುವ ನೆಪದಲ್ಲಿ ಒಟ್ಟು 93,818 ರೂ., ವಂಚಿಸಲಾಗಿದೆ ಎಂದು ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo