ಕೊರಗಜ್ಜನ ವೇಷ ಧರಿಸಿ ಅವಮಾನ ಮಾಡಿದ ಘಟನೆ ನಡೆದಿದೆ. ರವೀಂದ್ರ ಎನ್ನುವವರು ಮೇಲೆ ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.
ಕೊರಗಜ್ಜ ದೈವದ ವೇಷಧರಿಸಿ ರವೀಂದ್ರ ಎನ್ನುವವರು ಸ್ಟೇಟಸ್ ಹಾಕಿದ್ದರು. ಸ್ಟೇಟಸ್‌ನಲ್ಲಿ ಈದು ಗ್ರಾಮದ ರವೀಂದ್ರ ಎಂಬುವವರು ಕೊರಗಜ್ಜನ ವೇಷಧರಿಸಿ ಅಪಹಾಸ್ಯ ಮಾಡಿರುವುದು ಕಂಡುಬಂದಿತ್ತು. ರವೀಂದ್ರ ತನ್ನ ಮೊಬೈಲಿನಲ್ಲಿ ಸ್ವಾಮಿ ಕೊರಗಜ್ಜನ ಬಗ್ಗೆ ಅಪಹಾಸ್ಯ ಮಾಡಿ ಸ್ಟೇಟಸ್ ಹಾಕಿಕೊಂಡಿದ್ದ.
ಈ ಬಗ್ಗೆ ಯೋಗೀಶನ ಮೊಬೈಲ್ ನಿಂದ ಚೇತನ್ ರವರು ರವೀಂದ್ರನ ಮೊಬೈಲ್ ಗೆ ಕರೆ ಮಾಡಿ ವಿಚಾರಿಸಿದಾಗ ರವೀಂದ್ರನು ತಾನು ಕೊರಗಜ್ಜನ ಬಗ್ಗೆ ಸ್ಟೇಟಸ್ ಹಾಕಿದ್ದೇನೆ ಏನಾಯ್ತು, ಮುಂದೆಯೂ ಇದಕ್ಕಿಂತ ಹೆಚ್ಚಿನ ರೀತಿಯ ವೇಷ ಹಾಕಿ ಸಂಭ್ರಮಿಸುತ್ತೇನೆ ಎಂದು ಮರು ಉತ್ತರ ನೀಡಿದ್ದ ಎನ್ನಲಾಗಿದೆ.
ಈ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ