ಇವರು ಈ ಸಾವಿನ ಕುರಿತು ಯಕ್ಷಗಾನ ಕಲಾರಂಗ ಗಾಢ ಸಂತಾಪ ವ್ಯಕ್ತಪಡಿಸಿದೆ. ಇಂದು ಬೆಳಗ್ಗೆ 10:30 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇವರ ಯಕ್ಷರಂಗ ಸೇವೆ ಅಂದಾಜು 38 ವರ್ಷಗಳ ಕಾಲ ಸ್ತ್ರೀ ವೇಷಧಾರಿಯಾಗಿ ರಂಗ ಮೇಲೆ ಅಭಿನಯ ಶಾರದೆಯಾಗಿ ಮೆರೆದಿದ್ದ ಅವರು ಬಡಗುತಿಟ್ಟಿನ ಪ್ರಸಿದ್ದ ಮೇಳಗಳಾದ ಶ್ರೀ ಕ್ಷೇತ್ರ ಮಂದಾರ್ತಿ, ಶ್ರೀ ಕ್ಷೇತ್ರ ಮಾರಣಕಟ್ಟೆ, ಶ್ರೀ ಕ್ಷೇತ್ರ ಸೌಕೂರು, ಶ್ರೀ ಕ್ಷೇತ್ರ ಅಮೃತೇಶ್ವರಿ. ಶ್ರೀ ಕ್ಷೇತ್ರ ಇಡಗುಂಜಿ, ಶ್ರೀ ಕ್ಷೇತ್ರ ಕಮಲಶಿಲೆ ಮೇಳಗಳಲ್ಲಿ ಹಾಗೂ ವೃತ್ತಿ ಮೇಳಗಳಾದ ಪೆರ್ಡೂರು ಹಾಗೂ ಸಾಲಿಗ್ರಾಮ ಮೇಳಗಳಲ್ಲಿ ಬಣ್ಣದ ಸೇವೆಯನ್ನು ಮಾಡುವ ಮೂಲಕ ಸುಮಾರು 5 ದಶಕಗಳ ಕಾಲ ಯಕ್ಷಾಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ.
ಇವರು ಯಕ್ಷಗಾನ ರಂಗದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಗೆ ಭಾಜನರಾಗಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ