ಕಾರ್ಕಳ: ಜನವರಿ 15ರಂದು ಬೆಳ್ಮಣ್ ಪೇಟೆಗೆ ತೆರಳಿದ್ದ ವ್ಯಕ್ತಿ ಹಿಂದಿರುಗಿ ಬಾರದೆ ನಾಪತ್ತೆಯಾಗಿರುವ ಘಟನೆ ಕಾರ್ಕಳ ತಾಲೂಕಿನ ಬೆಳ್ಮಣ್‌ನಲ್ಲಿ ನಡೆದಿದೆ. ಬೆಳ್ಮಣ್ ನಿವಾಸಿ ಪ್ರಶಾಂತ್ ಕಾಮತ್ (35) ನಾಪತ್ತೆಯಾದ ವ್ಯಕ್ತಿ.
ಇಲ್ಲಿನ ಕಾಮಾಕ್ಷಿ ಕೃಪಾದ ನಿವಾಸಿ ಪ್ರಶಾಂತ್ ಕಾಮತ್, ಅವಿವಿವಾಹಿತರಾಗಿದ್ದು, ನಂದಳಿಕೆ ಗ್ರಾಮದ ಗೋಳಿಕಟ್ಟೆ ಎಂಬಲ್ಲಿ ವಿದ್ಯುತ್ ಸಬ್‌ಸ್ಟೇಷನ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು. ಇವರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಒಂದು ವರ್ಷದಿಂದ ಕೆಲಸಕ್ಕೆ ಹೋಗದೆ ಮನೆಯಲ್ಲಿದ್ದರು ಎನ್ನಲಾಗಿದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ