Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಮುಲ್ಕಿ: ಮುಲ್ಕಿಯ ಅಭಿವೃದ್ಧಿಗೆ ದಿ.ಡಾ.ಅಚ್ಯುತ ಕುಡ್ವ ಸೇವೆ ಅನನ್ಯ: ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ16-3-2022

ಮುಲ್ಕಿ: ಮುಲ್ಕಿಯ ಅಭಿವೃದ್ಧಿಗೆ ದಿ.ಡಾ.ಅಚ್ಯುತ ಕುಡ್ವ ಸೇವೆ ಅನನ್ಯ: ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ

ಮುಲ್ಕಿ: ಹಿರಿಯ ವೈದ್ಯ ಹಾಗೂ ಶಿಕ್ಷಣತಜ್ಞರಾಗಿ ಮುಲ್ಕಿಯ ಅಭಿವೃದ್ಧಿಗೆ ಡಾ.ಅಚ್ಯುತ ಕುಡ್ವ ಸೇವೆ ಅನನ್ಯ ಎಂದು ಬೆಂಗಳೂರಿನ ಅಂತರಾಷ್ಟ್ರೀಯ ವಾಸ್ತುತಜ್ಞ ಹಾಗೂ ವೈಜ್ಞಾನಿಕ ಜ್ಯೋತಿಷಿ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.

ಅವರು. ಮುಲ್ಕಿಯ ಶ್ರೀ ವೆಂಕಟರಮಣ ದೇವಸ್ಥಾನದ ಸಭಾಭವನದಲ್ಲಿ ದಿ.ಡಾ.ಅಚ್ಯುತ ಕುಡ್ವ ರವರಿಗೆ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪುಷ್ಪ ನಮನ ಸಲ್ಲಿಸಿ ಮಾತನಾಡಿ ಶಿಕ್ಷಣ ತಜ್ಞರಾಗಿ ಸಾಮಾಜಿಕ ಕಾರ್ಯಕರ್ತರಾಗಿ ವೈದ್ಯರಾಗಿ ಅವರ ಸೇವೆ ಅಪಾರ ಎಂದು ಹೇಳಿ ಅವರ ಜೊತೆ ತಮ್ಮ ಒಡನಾಟವನ್ನು ಸ್ಮರಿಸಿಕೊಂಡರು

ಈ ಸಂದರ್ಭ ಮಾಜಿ ಸಚಿವ ಕೆ ಅಭಯಚಂದ್ರ, ವಿನಯ್ ಕುಮಾರ್ ಸೊರಕೆ,ಮುಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಅತುಲ್ ಕುಡ್ವ, ಜ್ಯೋತಿಷಿ ವಿಶ್ವನಾಥ ಭಟ್, ಉದ್ಯಮಿ ಅರವಿಂದ ಪೂಂಜಾ ಕಾರ್ನಾಡ್, ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ನಿರ್ದೇಶಕಿ ರಜನಿ ಸಿ ಭಟ್, ರಾಹುಲ್ ಸಿ ಭಟ್, ರೋಶನಿ ಭಟ್, ಸಂಚಾಲಕ ಪುನೀತ್ ಕೃಷ್ಣ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್, ಮಂಡಲಾಧ್ಯಕ್ಷ ಸುನಿಲ್ ಆಳ್ವ, ಡಾ. ಹರಿಶ್ಚಂದ್ರ ಪಿ ಸಾಲ್ಯಾನ್, ನರಸಿಂಹ ಪೈ, ಅರ್ಚಕ ಪ್ರಶಾಂತ್ ಭಟ್, ನಿವೃತ್ತ ಉಪನ್ಯಾಸಕ ಸ್ಯಾಮ್ ಮಾಬೆನ್, ಶಮೀನ ಆಳ್ವ,ಗಣೇಶ್ ಕುಡ್ವ ,ಅರುಣ್ ಕುಡ್ವ, ಅಜಯ್ ಕುಡ್ವ, ಉದಯಕುಮಾರ್ ಶೆಟ್ಟಿ ಅಧಿಧನ್, ಕಿಶೋರ್ ಶೆಟ್ಟಿ ಬಪ್ಪನಾಡು, ಮುಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ವಿನೋದ್ ಸಾಲ್ಯಾನ್ ಬೆಳ್ಳಾಯರು, ಮಾಜೀ ಅಧ್ಯಕ್ಷ ವೆಂಕಟೇಶ್ ಹೆಬ್ಬಾರ್, ಮತ್ತಿತರರು ಉಪಸ್ಥಿತರಿದ್ದರು
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo