ಉಡುಪಿ ದೊಡ್ಡಣಗುಡ್ಡೆಯ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ
ತಾರೀಕು ಹದಿನೆಂಟರ ಶುಕ್ರವಾರಇಂದು ಶುಕ್ರವಾರ ಹುಣ್ಣಿಮೆಯ ಪರ್ವಕಾಲದಲ್ಲಿ ಪರ್ವಕಾಲದಲ್ಲಿ ಶ್ರೀ ಲಲಿತಾ ತ್ರಿಪುರಸುಂದರಿ ಮಹಾಯಾಗ ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿಗಳ ನೇತ್ರತ್ವದಲ್ಲಿ ನೆರವೇರಲಿರುವುದು.
ದಕ್ಷಿಣ ಭಾರತದಲ್ಲಿ ಅತಿ ಎತ್ತರವಾದ ಮೇರು ಶ್ರೀಚಕ್ರವನ್ನು ಹೊಂದಿರುವ ಶ್ರೀ ಕ್ಷೇತ್ರದಲ್ಲಿ ಶ್ರೀಚಕ್ರ ಮಾತೆಯಾದ ರಾಜರಾಜೇಶ್ವರಿಯ ಅನುಗ್ರಹಕ್ಕಾಗಿ ಸಹಸ್ರ ಸಹಸ್ರ ಸಂಖ್ಯೆಯ ಕದಳಿ ಹಣ್ಣಿನಿಂದ ತ್ರಿಮಧುರ ಯುಕ್ತವಾಗಿ ಯಾಗವನ್ನು ನಡೆಸಲಾಗುವುದು.
ಯಾಗದ ಅಂಗವಾಗಿ ಬ್ರಾಹ್ಮಣ ಸುವಾಸಿನಿ ಆರಾಧನೆ ಕನ್ನಿಕಾರಾಧನೆ ಬ್ರಾಹ್ಮಣ ಆರಾಧನೆ ಅನ್ನಸಂತರ್ಪಣೆ ನೆರವೇರಲಿರುವುದು.
ಬೆಳಿಗ್ಗೆ ಘಂಟೆ 9ರಿಂದ ಆರಂಭಗೊಳ್ಳಲಿರುವ ಈ ಮಹಾನ್ ಯಾಗವು ಬೆಂಗಳೂರಿನ ಡಾಕ್ಟರ್ ಸತ್ಯನಾರಾಯಣ ಭಟ್ ಹಾಗೂ ಗೀತಾ ಸತ್ಯನಾರಾಯಣಭಟ್ ದಂಪತಿಗಳಿಂದ ಕ್ಷೇತ್ರಕ್ಕೆ ಪ್ರಾಯಶ್ಚಿತ್ತ ಪೂರ್ವಕವಾಗಿ ಕ್ಷೇತ್ರದಲ್ಲಿ ಸಂಪನ್ನಗೊಳ್ಳಲಿದೆ ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮಾ ನಾಗರಾಜ್ ತಿಳಿಸಿರುತ್ತಾರೆ .
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ