ವಿಧಾನಸೌಧದಲ್ಲಿ ಸುದ್ದಿಗಾರರು ಕೇಳಿದ ಹಲಾಲ್ ಮಾಂಸ್ ಕ್ಕೆ ಹಿಂದು ಸಂಘಟನೆಗಳು ಬಹಿಷ್ಕಾರ ಪ್ರಶ್ನೆಗೆ ಉತ್ತರಿಸಿದ ಸಿಟಿ ರವಿ ಆರ್ಥಿಕ ಜಿಹಾದ್ ಅಂದ್ರೆ ಮುಸ್ಲಿಂರು ಇನ್ನೊಬ್ಬರ ಜೊತೆ ವ್ಯಾಪಾರ ಮಾಡಬಾರದು ಎಂದು ಒಂದು ಎಕಾನಾಮಿಕ್ ಜಿಹಾದ್ ತರಹ ಉಪಯೋಗಿಸುತ್ತಾರೆ.
ಹಲಾಲ್ ಮಾಂಸವನ್ನ ಉಪಯೋಗಿಸಬಾರದು ಅಂದ್ರೆ ತಪ್ಪೇನು. ಹಲಾಲ್ ಮಾಂಸ್ ಅವರ ದೇವರಿಗೆ ಒಪ್ಪಿಸಿದ್ದು ಅವರಿಗೆ ಪ್ರೀಯಾ ನಮ್ಮ ದೇವರಿಗೆ ಎಂಜಲು ಎಂದರು.
ಹಲಾಲ್ ಮಾಂಸ ಉಪಯೋಗಿಸಿ ಅಂತ ಹೇಗೆ ರೈಟ್ಸ್ ಇದೆಯೋ ಹಾಗೆ , ಅದನ್ನ ಬಹಿಷ್ಕಾರಿಸಿ ಅಂತ ಹೇಳುವ ರೈಟ್ಸ್ ನಮ್ಗೆ ಇದೆ.ಹಲಾಲ್ ಅಂದ್ರೆ ಮುಸ್ಲಿಂರ ಧಾರ್ಮಿಕ ಕ್ರಿಯೆ, ಅದು ಅವರಿಗೆ ಪ್ರಿಯವಾಗಿರುತ್ತೆ. ಅದನ್ನ ಎಲ್ಲರೂ ಒಪ್ಪಿಕೊಳ್ಳಬೇಕು ಅಂತೆನಾದ್ರು ಇದೆಯಾ. ಸಾಮರಸ್ಯವನ್ನು ಹೇರುವುದಕ್ಕೆ ಬರೋದಿಲ್ಲ, ಹಾಗಂತ ಸಾಮರಸ್ಯ ಒನ್ ವೇ ಅಲ್ಲ ಅದು ಟೂ ವೇ ಎಂದು ಹೇಳಿದರು.
ಹಲಾಲ್ ಇಲ್ಲದ ಮಾಂಸ ಅವರು ತಿನ್ನೋದಕ್ಕೆ ರೆಡಿಯಾದ್ರೆ ಹಲಾಲ್ ಆಗಿರುವ ಮಾಂಸ ಇವರು ತಿನ್ನುತ್ತಾರೆ, ಈ ಹಿಂದೆ ಇರುವಂತ ನಿಯಮಗಳನ್ನೆಲ್ಲ ಈಗಲೂ ಒಪ್ಪಿಕೊಳ್ಳಲು ಆಗುತ್ತಾ? ಒಬ್ಬ ಹಿಂದು ಮಟನ್ ಸ್ಟಾಲ್ ಇಟ್ಟರೆ ಮುಸ್ಲಿಂರು ಬಂದು ತಗೋತಾರಾ? ಮುಸ್ಲಿಂರ ಅಂಗಡಿಯಲ್ಲಿ ತಗೋಬೇಕು ಅಂತ ನೀವ್ ಯಾಕೆ ಹೇಳ್ತೀರಾ? ಹೇಳೋಕೆ ಏನ್ ರೈಟ್ಸ್ ಇದೆ ಎಂದು ಪ್ರಶ್ನಿಸಿದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ