Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

*ಅಲ್ಪ ಸಂಖ್ಯಾತ ಮಕ್ಕಳ ಸ್ಕಾಲರ್ ಶಿಪ್ ಗೊಂದಲಗಳಿಗೆ ತೆರೆಎಳೆದ ಸಿಎಂ ಬೊಮ್ಮಾಯಿ*28-3-2022

*ಅಲ್ಪ ಸಂಖ್ಯಾತ ಮಕ್ಕಳ ಸ್ಕಾಲರ್ ಶಿಪ್ ಗೊಂದಲಗಳಿಗೆ ತೆರೆಎಳೆದ ಸಿಎಂ ಬೊಮ್ಮಾಯಿ*

ಶಾಲಾ ಮಕ್ಕಳ ಸ್ಕಾಲರ್ ಶಿಪ್, ಹೈಯರ್ ಎಜುಕೇಶನ್ ನಿಲ್ಲಿಸುವ ಕೆಲ ಪ್ರಯತ್ನ ಆಗಿತ್ತು. ಆದರೆ ಯಾವುದನ್ನೂ ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.


ಬಜೆಟ್​ ಅಧಿವೇಶನದಲ್ಲಿ ವಿಧಾನಪರಿಷತ್​ನಲ್ಲಿ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಮುಖ್ಯಮಂತ್ರಿಗಳಿಗೆ ‘ಅಲ್ಪ ಸಂಖ್ಯಾತ ಮಕ್ಕಳಿಗೆ ಸ್ಕಾಲರ್ ಶಿಪ್ ನಿಲ್ಲಿಸಲಾಗ್ತಿದೆ. ಹಿಜಾಬ್ ವಿಚಾರ ನೀವು ಏನಾದ್ರೂ ಮಾಡಿಕೊಳ್ಳಿ. ಅದ್ರೆ, ಸ್ಕಾಲರ್ ಶಿಪ್ ದಯವಿಟ್ಟು ನಿಲ್ಲಿಸಬೇಡಿ’ ಎಂದರು.


ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮಕ್ಕಳ ಸ್ಕಾಲರ್ ಶಿಪ್ʼಗೆಂದೇ 100 ಕೋಟಿ ರೂಪಾಯಿ ಅನುದಾನವನ್ನೂ ಮಂಜೂರು ಮಾಡ್ತೇನೆ. ಯಾವೊಬ್ಬ ಅಲ್ಪಸಂಖ್ಯಾತ ಮಕ್ಕಳ ಸ್ಕಾಲರ್ ಶಿಪ್ ನಿಲ್ಲಿಸೋದಿಲ್ಲ. ಮಕ್ಕಳ ವಿಷಯದಲ್ಲಿ ಯಾವುದೇ ತಾರತಮ್ಯ ಮಾಡದೇ ಅವರಿಗೆ ಸ್ಕಾಲರ್ ಶಿಪ್ ಒದಗಿಸುತ್ತೇವೆ.ಆದರೆ ಶಾದಿ ಮಹಲ್ ಮಾತ್ರ ನಿಲ್ಲಿಸುತ್ತೇವೆ, ಅದನ್ನು ಬಿಟ್ಟು ಅಲ್ಪಸಂಖ್ಯಾತರ ಯಾವುದೇ ಯೋಜನೆ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo