ಇಂದು ನನಗೆ ಕಷ್ಟದ ದಿನವಾಗಿದೆ. ಆದರೆ, ಇಂತಹದೊಂದು ದಿನ ಬಂದೇ ಬರಲಿದೆ ಎಂದು ತಿಳಿದಿದ್ದೆ. ಭಾರತ ತಂಡ ಸೇರಿದಂತೆ ವಿವಿಧ ತಂಡಗಳ ಜೊತೆ ಆಡಿದ ದಿನಗಳು ಸ್ಮರಣೀಯ. ಇದೀಗ ನನ್ನ 25 ವರ್ಷಗಳ ಕ್ರಿಕೆಟ್ ಜೀವನದಿಂದ ದೂರ ಸರಿದು, ಕುಟುಂಬದೊಂದಿಗೆ ಕಾಲ ಕಳೆಯಲು ಇಚ್ಚಿಸಿದ್ದೇನೆ. ತಂಡದಲ್ಲಿ ಆಡಲು ಅವಕಾಶ ಮಾಡಿಕೊಟ್ಟ ಐಸಿಸಿ, ಬಿಸಿಸಿಐಗೆ ಧನ್ಯವಾದಗಳು ಎಂದು ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
ಕೇರಳದ ವೇಗದ ಬೌಲರ್ ಎಸ್. ಶ್ರೀಶಾಂತ್ 27 ಟೆಸ್ಟ್, 53 ಏಕದಿನ ಮತ್ತು 10 ಟಿ-20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಅವರು 2007ರಲ್ಲಿ ಟಿ-20 ವಿಶ್ವಕಪ್ ಮತ್ತು 2011 ರ ಏಕದಿನ ವಿಶ್ವಕಪ್ ಗೆದ್ದ ಭಾರತದ ತಂಡದಲ್ಲಿದ್ದರು. ಇದಲ್ಲದೇ, ಇಸಿಸಿ, ಎರ್ನಾಕುಲಂ ಜಿಲ್ಲಾ ತಂಡ, ಲೀಗ್ ಮತ್ತು ಟೂರ್ನಮೆಂಟ್ ತಂಡಗಳು, ಕೇರಳ ರಾಜ್ಯ ಕ್ರಿಕೆಟ್ ಸಂಸ್ಥೆ, ವಾರ್ವಿಕ್‌ಷೈರ್ ಕೌಂಟಿ ಕ್ರಿಕೆಟ್ ತಂಡ, ಇಂಡಿಯನ್ ಏರ್‌ಲೈನ್ಸ್ ಕ್ರಿಕೆಟ್ ತಂಡದಲ್ಲಿ ಆಡಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ