ಇನ್ನು ಈ ಘಟನೆಗೆ ಸಂಬಂಧಿಸಿದಂತೆ ನಿನ್ನೆ ಬೆಳಗಿನ ಜಾವ ನಾಯಿಗಳ ಸದ್ದಿಗೆ ನಾರಾಯಣ್ ನಾಯಕ್ ಅವರು ಮನೆಯ ಕಿಟಕಿ ಬಾಗಿಲು ತೆರೆದು ನೋಡಿದಾಗ ಮೂರು ಜನ ವ್ಯಕ್ತಿಗಳು ತಲ್ವಾರು ಮತ್ತು ಇತರ ಆಯುಧವನ್ನು ಹಿಡಿದುಕೊಂಡು ಅಂಗಳದಲ್ಲಿ ಕಟ್ಟಿ ಹಾಕಿದ್ದ ಒಂದು ದನವನ್ನು ಹಗ್ಗ ಸಮೇತ ಬಿಚ್ಚಿ ಎಳೆದುಕೊಂಡು ಹೋಗುತ್ತಿದ್ದಾಗ ದನ ತಪ್ಪಿಸಿಕೊಂಡಿದೆ.
ಈ ವೇಳೆ ಆರೋಪಿಗಳು ಅದೇ ಹಗ್ಗದಿಂದ ಅಲ್ಲಿ ಇದ್ದ ಇನ್ನೊಂದು ದನವನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಎಳೆದು ಕೊಂಡು ಹೋಗಿ ಕಾರಿನಲ್ಲಿ ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿಕೊಂಡು ಪರಾರಿಯಾಗಿದ್ದಾರೆ. ಕಳವಾದ ದನದ ಮೌಲ್ಯ ರೂ. 2000 ಆಗಿರುತ್ತದೆ ಎಂದು ನೀಡಿದದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ