ಅನಿರುದ್ಧ್ ಶಾಸ್ತ್ರಿ ಹಾಗೂ ವೇದಿಕ ಈ ಹಾಡನ್ನು ಸುಶ್ರಾವ್ಯವಾಗಿ ಹಾಡಿದ್ದಾರೆ. ಬರೀ ಹಾಡಿನ ಚಿತ್ರೀಕರಣವಲ್ಲದೆ, ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ಸಹ ಉಡುಪಿ ಆಸುಪಾಸಿನಲ್ಲಿ ನಡೆದಿದೆ. ಮಾಸಾಂತ್ಯಕ್ಕೆ ಕೊನೆಯ ಹಂತದ ಚಿತ್ರೀಕರಣ ಆರಂಭವಾಗಲಿದೆ.
ಕಲಾವಿದರಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ತಿರುಮಲೇಶ್, ಕನ್ನಡದ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಕ್ರೈಂ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ, ಚಿತ್ರಕಥೆ ಬರೆದಿದ್ದಾರೆ.
ರಾಜ ರವಿಶಂಕರ್, ತಿರುಮಲೇಶ್, ಸಿದ್ದರಾಜು, ಪ್ರಶಾಂತ್ ಸಂಭಾಷಣೆಬರೆದಿದ್ದಾರೆ. ವೇದಿಕ ಹಾಗೂ ದ್ವೇಪಾಯನ ಐದು ಹಾಡುಗಳಿರುವ ಈ
ಸಂಗೀತ ನೀಡುತ್ತಿದ್ದಾರೆ. ಕೆಂಪಗಿರಿ ಹಾಗೂ ವೇದಿಕ ಹಾಡುಗಳನ್ನು ರಚಿಸಿದ್ದಾರೆ.ಕಾರ್ತಿಕ್ ಪ್ರಸಾದ್ ಛಾಯಾಗ್ರಹಣ, ವಿಕ್ರಮ್ ಶ್ರೀಧರ್ ಸಂಕಲನ ಹಾಗೂ ತರ್ಮಾಕೋಲ್ ಶ್ರೀನಿವಾಸ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಹಾಗೂ ಕ್ರಿಯೇಟಿವ್ ಹೆಡ್ ಸುರೇಶ್ .ಬಿ.
ಜಯ ಹರಿಪ್ರಸಾದ್(ಜೆರ್ರಿ ಮಾಸ್ಟರ್) ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ವಿನೋದ್ ದೇವ್, ಸುಹಾಸ್ ಆತ್ರೇಯ, ರುದ್ರೇಶ್ ಬುದನೂರು ಈ ಚಿತ್ರದ ನಾಯಕರಾಗಿ ನಟಿಸುತ್ತಿದ್ದು, ನಾಯಕಿಯರಾಗಿ ಸ್ನೇಹ ಭಟ್, ಇಂಚರ ಬಿ ಚನ್ನಪ್ಲ ಇದ್ದಾರೆ. ಶಿವಮಂಜು, ವೆಂಕಟಾಚಲ, ಜೂ ನರಸಿಂಹರಾಜು, ರಂಗನಾಥ ಬಿ, ಶ್ರೀಧರ್ ಟಿ ಎಸ್, ಸುರೇಶ್ ಬಿ, ಸಂಚಯ ನಾಗರಾಜ್, ಶಿವಾನಂದ, ಆಶಾ, ರೂಪ ಆರ್, ಮಹೇಶ್ ಎಸ್ ಕಲಿ, ಕಿರಣ್, ಸಂತೋಷ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ