ಶ್ರೀಲಂಕಾ ವಿರುದ್ಧ ಬ್ಯಾಟಿಂಗ್‌ನಲ್ಲಿ ಅಜೇಯ 175 ರನ್ ಸಿಡಿಸಿದ ಕಾರಣದಿಂದಾಗಿ ಬ್ಯಾಟಿಂಗ್ ವಿಭಾಗದಲ್ಲಿ 17 ಸ್ಥಾನಗಳ ಏರಿಕೆ ಕಂಡಿರುವ ಜಡೇಜಾ 54ರಿಂದ 34ನೇ ಸ್ಥಾನಕ್ಕೇರಿದ್ದಾರೆ. ಇನ್ನು 9 ವಿಕೆಟ್ ಪಡೆದ ಜಡೇಜಾ ಬೌಲರ್‌ಗಳ ಪಟ್ಟಿಯಲ್ಲಿ 17ನೇ ಸ್ಥಾನಕ್ಕೇರಿದ್ದಾರೆ.
ಇನ್ನು ಟೆಸ್ಟ್‌ನಲ್ಲಿ ಈ ಮೊದಲು ವೆಸ್ಟ್ ಇಂಡೀಸ್ ಆಲ್‌ರೌಂಡರ್ ಜೇಸನ್ ಹೋಲ್ಡರ್ ನಂಬರ್ 1 ಆಲ್‌ರೌಂಡರ್ ಸ್ಥಾನದಲ್ಲಿದ್ದರು. ಲಂಕಾ ವಿರುದ್ಧ ನೀಡಿದ ಪ್ರದರ್ಶನ ಮತ್ತೊಮ್ಮೆ ಜಡೇಜಾ ಅವರನ್ನು ನಂಬರ್ 1 ಸ್ಥಾನಕ್ಕೇರಿಸಿದೆ. ಇದಕ್ಕೂ ಮುನ್ನ ಜಡೇಜಾ 2017ರ ಆಗಸ್ಟ್‌ನಲ್ಲಿ ನಂಬರ್ 1 ಸ್ಥಾನದಲ್ಲಿದ್ದರು. ಆದರೆ ಆಗ ಕೇವಲ ಒಂದು ವಾರಗಳ ಕಾಲ ಮಾತ್ರವೇ ಅಗ್ರಸ್ಥಾನದಲ್ಲಿ ಜಡ್ಡು ಮುಂದುವರಿದಿದ್ದರು.
ಇನ್ನು ಬ್ಯಾಟರ್‌ಗಳ ಶ್ರೇಯಾಂಕಪಟ್ಟಿಯಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಎರಡು ಸ್ಥಾನಗಳ ಏರಿಕೆ ಕಂಡಿದ್ದು ಐದನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಯುವ ಬ್ಯಾಟರ್ ಮಾರ್ನಾಸ್ ಲ್ಯಾಬುಶೈನ್ ಅಗ್ರಸ್ಥಾನದಲ್ಲಿದ್ದು 936 ಅಂಕಗಳನ್ನು ಹೊಂದಿದ್ದಾರೆ. ರೋಹಿತ್ ಶರ್ಮಾ 6ನೇ ಸ್ಥಾನದಲ್ಲಿದ್ದರೆ ರಿಷಭ್ ಪಂತ್ 10ನೇ ಸ್ಥಾನದಲ್ಲಿದ್ದು ಅಗ್ರ ಸ್ಥಾನದಲ್ಲಿರುವ ಭಾರತದ ಇತರ ಆಟಗಾರರಾಗಿದ್ದಾರೆ.
ಇನ್ನು ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಟೆಸ್ಟ್ ಸರಣಿ ನಡೆಯುತ್ತಿದ್ದು ಈ ಸರಣಿಯ ಮೊದಲ ಪಂದ್ಯದಲ್ಲಿ ಆಡಗಾರರು ನೀಡಿದ ಪ್ರದರ್ಶನ ಕುಡ ಈ ಶ್ರೇಯಾಂಕಪಟ್ಟಿಯಲ್ಲಿ ಕೆಲ ಬದಲಾವಣೆಗೆ ಕಾರಣವಾಗಿದೆ. ಪಾಕಿಸ್ತಾನ ತಂಡದ ಪರ ಎರಡೂ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದ ಇಮಾಮ್ ಉಲ್ ಹಕ್, ಮತ್ತೋರ್ವ ಆಟಗಾರ ಅಜರ್ ಅಲಿ, ಅಬ್ದುಲ್ಲಾ ಶಫೀಕ್ ಶ್ರೇಯಾಂಕಪಟ್ಟಿಯಲ್ಲಿ ಏರಿಕೆ ಕಂಡ ಆಟಗಾರರಾಗಿದ್ದಾರೆ.
ಇನ್ನು ಟೆಸ್ಟ್ ಶ್ರೇಯಾಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಮಾರ್ನಾಸ್ ಲ್ಯಾಬುಶೈನ್ ರಾವಲ್ಪಿಂಡಿ ಟೆಸ್ಟ್‌ನಲ್ಲಿ ಶತಕವಂಚಿತರಾಗಿದ್ದು ಅಂಕದಲ್ಲಿ ಏರಿಕೆ ಕಂಡಿದ್ದಾರೆ. ಈ ಮೂಲಕ ಟೆಸ್ಟ್ ಶ್ರೇಯಾಂಕದ ಬ್ಯಾಟಿಂಗ್ ವಿಭಾಗದಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ಆಟಗಾರರ ಪಟ್ಟಿಯಲ್ಲಿ ಲ್ಯಾಬುಶೈನ್ 12ನೇ ಸ್ಥಾನದಲ್ಲಿದ್ದಾರೆ. ಇನ್ನು ಆಸ್ಟ್ರೇಲಿಯಾ ಪರ ಮತ್ತೋರ್ವ ಶತಕವಂಚಿತ ಆಟಗಾರ ಉಸ್ಮಾನ್ ಖವಾಜ ಕುಡ ಏರಿಕೆ ಕಂಡಿದ್ದು ಬ್ಯಾಟರ್‌ಗಳ ಪಟ್ಟಿಯಲ್ಲಿ 24ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ