ಬ್ರಹ್ಮಾವರ: ಮದುವೆ ಹಾಲ್ ಡೆಕೋರೇಶನ್ನಿಗೆ ಬಂದ ವ್ಯಕ್ತಿ ನಿಲ್ಲಿಸಿ ಹೋಗಿದ್ದ ಬೈಕನ್ನು ಕಳವುಗೈದ ಘಟನೆ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ವಾರಂಬಳ್ಳಿ ಎಂಬಲ್ಲಿ ನಡೆದಿದೆ. ಮಟಪಾಡಿ ಗ್ರಾಮದ ಅಂಜಾಲು, ಮೇಲ್ಮನೆ ನಿವಾಸಿ ವೀರೇಶ್ ಎಂಬುವವರು ಬೈಕ್ ಕಳೆದುಕೊಂಡವರು.
ವೀರೇಶ್ ತನ್ನ ಯಮಾಹಾ ಬೈಕನ್ನು ವಾರಂಬಳ್ಳಿ ಗ್ರಾಮದ ಸಿಟಿ ಸೆಂಟರ್ ಎದುರುಗಡೆಯಿರುವ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ ಸಿಟಿ ಸೆಂಟರ್ ಒಳಗೆ ಇರುವ ಕುಂಕುಮ ಹಾಲ್ನಲ್ಲಿ ಡೆಕೋರೇಟ್ ಕೆಲಸ ಮುಗಿಸಿಕೊಂಡು ಬಂದು ನೋಡಿದಾಗ ಅವರ ಮೋಟಾರ ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿರುವುದು ತಿಳಿದು ಬಂದಿದೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ