ನ್ಯೂ ಡೆಲ್ಲಿ ಟೆಲಿವಿಷನ್ (ND ಟಿವಿ) ಗೌತಮ್ ಅದಾನಿ ತೆಕ್ಕೆಗೆ ಸೇರುವುದು ಖಚಿತವಾಗುತ್ತಿದ್ದಂತೆ ಪ್ರಣಯ್ ಹಾಗೂ ಅವರ ಪತ್ನಿ ರಾಧಿಕಾ ರಾಯ್ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
NDTVಯನ್ನು ಅದಾನಿ ಗ್ರೂಪ್ ಸ್ವಾಧೀನಪಡಿಸಿಕೊಳ್ಳಲು ಸಮೀಪಿಸುತ್ತಿರುವ ಕಾರಣ ಪ್ರವರ್ತಕ ಸಮೂಹ ವಾಹನ RRPR ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರ ಸ್ಥಾನಕ್ಕೆ ದಂಪತಿಗಳು ರಾಜೀನಾಮೆ ನೀಡಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಅದಾನಿ ಗ್ರೂಪ್ RRPRಅನ್ನು ಖರೀದಿ ಮಾಡಿದ್ದರು. ಈ ಸಂಸ್ಥೆ NDTVಯಲ್ಲಿ 29.18 ರಷ್ಟು ಪಾಲನ್ನು ಹೊಂದಿತ್ತು. ಆದಾಗ್ಯೂ, ರಾಯ್‌ಗಳು ಇನ್ನೂ ಎನ್‌ಡಿಟಿವಿಯಲ್ಲಿ 32.26 ಶೇಕಡಾ ಪಾಲನ್ನು ಪ್ರವರ್ತಕರಾಗಿ ಹೊಂದಿದ್ದಾರೆ ಮತ್ತು ಸುದ್ದಿ ವಾಹಿನಿಯ ಮಂಡಳಿಗೆ ರಾಜೀನಾಮೆ ನೀಡಿಲ್ಲ.
ಮಂಗಳವಾರ ತಡರಾತ್ರಿ ಸ್ಟಾಕ್ ಎಕ್ಸ್‌ಚೇಂಜ್ ಫೈಲಿಂಗ್‌ನಲ್ಲಿ, ದಂಪತಿಗಳು ಇಬ್ಬರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇವರ ರಾಜೀನಾಮೆ ನ.29ರಿಂದಲೇ ಅನ್ವಯವಾಗಲಿದೆ ಎಂದು ಹೇಳಲಾಗಿದೆ.
RRPR ಹೋಲ್ಡಿಂಗ್ ಮಂಡಳಿಯು ತಕ್ಷಣದಿಂದ ಜಾರಿಗೆ ಬರುವಂತೆ ಸುದೀಪ್ತ ಭಟ್ಟಾಚಾರ್ಯ, ಸಂಜಯ್ ಪುಗಾಲಿಯಾ ಮತ್ತು ಸೆಂಥಿಲ್ ಸಿನ್ನಯ್ಯ ಚೆಂಗಲ್ವರಾಯನ್ ಅವರನ್ನು ನಿರ್ದೇಶಕರನ್ನಾಗಿ ನೇಮಿಸಲು ಅನುಮೋದಿಸಿದೆ ಎಂದು NDTV ತಿಳಿಸಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ