ಕರ್ನಾಟಕದ ಅಥ್ಲೀಟ್ ಅಶ್ಚಿನಿ ಅಕ್ಕುಂಜೆ ಮತ್ತು ಕಬಡ್ಡಿ ಆಟಗಾರ ಬಿಸಿ ಸುರೇಶ್ ಜೀವಮಾನದ ಸಾಧನೆಗಾಗಿ ಪ್ರತಿಷ್ಠಿತ ಧ್ಯಾನ್ ಚಂದ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಉಡುಪಿ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅಶ್ವಿನಿ ಅಕ್ಕುಂಜೆ 400 ಮೀ. ರೀಲೆ ಓಟಗಾರ್ತಿಯಾಗಿದ್ದು, 2010ರ ಕಾಮನ್ ವೆಲ್ತ್ ಹಾಗೂ ಏಷ್ಯನ್ ಗೇಮ್ಸ್ ಗಳ ರಿಲೇ ತಂಡದಲ್ಲಿ ಚಿನ್ನದ ಪದಕ ಗೆದ್ದಿದ್ದರು. ಚೀನಾದ ಗುವಾಂಗ್ ಜುನಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ಅಶ್ವಿನಿ ಅಕ್ಕುಂಜೆ ವೈಯಕ್ತಿಕ 400 ಮೀ. ರೇಸ್ ನಲ್ಲಿ ಚಿನ್ನದ ಪದಕದ ಸಾಧನೆ ಮಾಡಿದ್ದರು.
ಮಾಜಿ ಕಬ್ಬಡ್ಡಿ ಆಟಗಾರ ಬಿಸಿ ಸುರೇಶ್ ಈಗಾಗಲೇ ಅರ್ಜುನ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಎರಡು ಬಾರಿ ಚಿನ್ನದ ಪದಕ ಗೆದ್ದ ಭಾರತ ತಂಡದ ಆಟಗಾರರಾಗಿದ್ದರು. ಅಲ್ಲದೇ ಪ್ರೊ ಕಬಡ್ಡಿ ಲೀಗ್ ನಲ್ಲಿ ಪ್ರಶಸ್ತಿ ತಂಡದ ಕೋಚ್ ಆಗಿದ್ದರು. ಪ್ರಸ್ತುತ ಬಂಗಾಳ್ ವಾರಿಯರ್ಸ್ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ