ಕಾಪು: ಕಾಪು ಪೇಟೆಯಲ್ಲಿ ಪೊಲೀಸರು ಪಿಎಫ್‍ಐ ಸಂಘಟನೆಯ ನಿಷೇಧದ ಪೋಸ್ಟರ್ ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸುತ್ತಿರುವ ದೃಶ್ಯ ನಿನ್ನೆ ಕಂಡು ಬಂದಿದೆ. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ ಹಿನ್ನೆಲೆಯಲ್ಲಿ ಪಿಎಫ್‍ಐ ಮತ್ತು ಅದರ ಅಂಗ ಸಂಘಟನೆಯನ್ನು ಬ್ಯಾನ್ ಮಾಡಲಾಗಿತ್ತು. ಪಿಎಫ್‍ಐ ಮತ್ತು ಅದರ ಅಂಗ ಸಂಸ್ಥೆಗಳನ್ನು ಕಾನೂನುಬಾಹಿರ ಸಂಘಟನೆಗಳು ಎಂದು ಘೋಷಿಸಿ, ಕೇಂದ್ರ ಗ್ರಹ ಸಚಿವಾಲಯವು ಹೊರಡಿಸಿರುವ ಆದೇಶದಂತೆ ರಾಜ್ಯ ಸರ್ಕಾರವು ಇಂತಹ ಕಾನೂನುಬಾಹಿರ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಅಧಿಕಾರವನ್ನು ನೀಡಿ ಆದೇಶ ಮತ್ತು ಅಧಿಸೂಚನೆ ನೀಡಿತ್ತು.
ಅದರಂತೆ ನ್ಯಾಯಮಂಡಳಿಯು ರಿಜಿಸ್ಟರ್ ಮೂಲಕ ಜಾರಿ ಮಾಡಿರುವ ನೋಟಿಸ್ ಮತ್ತು ಗಜೆಟ್ ನೋಟಿಫಿಕೇಶನ್ ಅನ್ನು ಸಾರ್ವಜನಿಕವಾಗಿ ಘೋಷಣೆ ಮಾಡುವ ಮೂಲಕ ಸಂಘದ ಚಟುವಟಿಕೆ ಇರುವಂತಹ ಸ್ಥಳಗಳಲ್ಲಿ ಪ್ರಚಾರಪಡಿಸಿ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಅವರ ಆದೇಶದಂತೆ ಕಾಪು ಪೇಟೆ ಪರಿಸರದಲ್ಲಿ ಪೊಲೀಸರ ನೇತೃತ್ವದಲ್ಲಿ ಪಿಎಫ್‍ಐ ಸಂಘಟನೆಯ ನಿಷೇಧದ ಪೋಸ್ಟರ್‌ಗಳನ್ನ ಅಂಟಿಸಲಾಗಿದೆ.
ಈ ಬಗ್ಗೆ ಕಾರ್ಯಪ್ರವೃತ್ತರಾದ ಕಾಪು ಪೊಲೀಸರು ಕಾಪು ಪೇಟೆಯ ಫ್ಲೈಓವರ್ ಗೋಡೆಗಳ ಮೇಲೆ ಹಾಗೂ ಇತರ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಪಿಎಫ್‍ಐ ನಿಷೇಧದ ಪೋಸ್ಟರ್‌ಗಳನ್ನು ಅಂಟಿಸಿ ಸಾರ್ವಜನಿಕವಾಗಿ ಮಾಹಿತಿಯನ್ನು ಪ್ರಚಾರ ಪಡಿಸಿ ಜಾಗೃತಿ ಮೂಡಿಸಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ