ಗಂಗೊಳ್ಳಿ : ಬೋಟ್ ನಲ್ಲಿ ತುಂಬಿದ್ದ ಮೀನು ಖಾಲಿ ಮಾಡುತ್ತಿದ್ದ ವೇಳೆ ಮೀನುಗಾರನೋರ್ವ ಆಯತಪ್ಪಿ ನದಿಯ ನೀರಿಗೆ ಬಿದ್ದು ಮೃತಪಟ್ಟ ಘಟನೆ ಗಂಗೊಳ್ಳಿ ಬಂದರಿನ ಪಂಚಗಂಗಾವಳಿ ನದಿಯಲ್ಲಿ ನಡೆದಿದೆ.
ಇನ್ನು ಮೃತ ಮೀನುಗಾರನನ್ನು ಒರಿಸ್ಸಾ ಮೂಲದ 32 ವರ್ಷ ಪ್ರಾಯದ ಪ್ರಮೋದ ಮಿನ್ಜ್ ಎಂದು ಗುರುತಿಸಲಾಗಿದೆ.
ವಿಷಯಕ್ಕೆ ಸಂಬಂಧಿಸಿದಂತೆ ಇವರು ಯಕ್ಷೇಶ್ವರಿ ಬೋಟ್ ನಲ್ಲಿ ಮೀನುಗಾರನಾಗಿ ಕೆಲಸ ಮಾಡಿಕೊಂಡಿದ್ದರು. ಅದರಂತೆ ನ.30 ರಂದು ಆಳಸಮುದ್ರ ಮೀನುಗಾರಿಕೆ ಮುಗಿಸಿಕೊಂಡು ಗಂಗೊಳ್ಳಿ ಬಂದರ ಬಳಿ ಪಂಚಗಂಗಾವಳಿ ನದಿಯಲ್ಲಿ ಬೋಟನ್ನು ನಿಲ್ಲಿಸಿ ಬೋಟಿನಿಂದ ಮೀನನ್ನು ಖಾಲಿ ಮಾಡಲಾಗುತ್ತಿತ್ತು.
ಈ ವೇಳೆ ಪ್ರಮೋದ್ ಆಕಸ್ಮಿಕವಾಗಿ ಆಯಾತಪ್ಪಿ ಬೋಟ್‌ನಿಂದ ನದಿಯ ನೀರಿಗೆ ಬಿದ್ದು ಕಾಣೆಯಾಗಿದ್ದರು. ಶೋಧ ಕಾರ್ಯ ಮುಂದುವರಿದು ಇಂದು ಬೆಳಿಗ್ಗೆ ನದಿಯಲ್ಲಿ ಪ್ರಮೋದ್ ಮೃತದೇಹ ಪತ್ತೆಯಾಗಿದೆ.
ಈ ಕುರಿತು ಗಂಗೊಳ್ಳಿ ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ