Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಕೋಟೇಶ್ವರ:-ಕೊಡಿ ಹಬ್ಬದಲ್ಲಿ ಅನ್ಯ ಧರ್ಮೀಯರ ವ್ಯಾಪಾರಕ್ಕೆ ಅವಕಾಶ ಬೇಡ; ವಿ.ಹಿಂ.ಪ ಆಗ್ರಹ

Udupi news

 


ಉಡುಪಿ : ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನಲ್ಲಿ ಪ್ರತಿ ವರ್ಷ ನವೆಂಬರ್‌ ಹಾಗೂ ಡಿಸೆಂಬರ್‌ನಲ್ಲಿ ಬರುವ ಮಹತ್ವದ ಜಾತ್ರೆ ಮಹೋತ್ಸವ ಎಂದರೆ  ಕೋಟೇಶ್ವರದ ಕೊಡಿ ಹಬ್ಬವಾಗಿದೆ. ಈ ಜಾತ್ರೆ ಡಿಸೆಂಬರ್‌ 8ರಂದು ಪ್ರಾರಂಭವಾಗಲಿದ್ದು, ಏಳು ದಿನಗಳ ಕಾಲ ಬಹಳಷ್ಟು ಸಂಭ್ರಮದಿಂದ ನಡೆಯುತ್ತದೆ. ಆದರೆ ಈ ವರ್ಷ ಈ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡದಂತೆ ಹಿಂದೂ ಪರ ಸಂಘಟನೆಗಳಾದ ವಿಶ್ವ ಹಿಂದೂ ಪರಿಷತ್‌ ಭಜರಂಗದಳ ಮನವಿ ಮಾಡಿದೆ.

ಭಯೋತ್ಪಾದನೆ, ಲವ್‌ ಜಿಹಾದ್‌ನಂತಹ ಪ್ರಕರಣ ಹೆಚ್ಚಿರುವ ಕಾರಣಕ್ಕೆ ಹಿಂದೂ ಸಂಘಟನೆಗಳು ಈ ರೀತಿಯ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಹಿಂದೂ ಸಂಘಟನೆಗಳ ಬೇಡಿಕೆಗೆ ವ್ಯವಸ್ಥಾಪನಾ ಸಮಿತಿ ಸಮ್ಮತಿಸುವ ಸಾಧ್ಯತೆ ಇದೆ. ಪ್ರತಿ ವರ್ಷ ಒಂದೇ ಸಮಯದಲ್ಲಿ ಉಡುಪಿ ಜಿಲ್ಲೆಯ ಎರಡು ಕಡೆಗಳಲ್ಲಿ ಕೊಡಿ ಹಬ್ಬದ ಜಾತ್ರೆ ನಡೆಯುತ್ತದೆ. ಒಂದು ಕೋಟೇಶ್ವರದ ಕೊಡಿ ಹಬ್ಬವಾದರೆ, ಇನ್ನೊಂದು ಉಪ್ಪುಂದದ ಕೊಡಿ ಹಬ್ಬವಾಗಿದೆ. ಉಪ್ಪುಂದ ಕೊಡಿ ಹಬ್ಬ ಈ ವರ್ಷ ಡಿಸೆಂಬರ್‌ 9ರಂದು ಜಾತ್ರ ಮಹೋತ್ಸವ ನೆರೆವೆರಲಿದ್ದು, ಈ ಜಾತ್ರೆ ಕೂಡ ಏಳು ದಿನಗಳ ಕಾಲ ಬಹಳ ವಿಜೃಂಭಣೆಯಿಂದ ನಡೆಯುತ್ತದೆ.

ಈ ಬಾರಿ ಉಪ್ಪುಂದದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲೂ ಧರ್ಮ ದಂಗಲ್‌ ಆರಂಭವಾಗಲಿದೆ. ಡಿಸೆಂಬರ್‌ ೯ರಂದು ನೆರವೇರಲಿರುವ ಜಾತ್ರಯಲ್ಲಿ ದೇವಸ್ಥಾನದ ಆವರಣದಲ್ಲಿ ಅನ್ಯಧರ್ಮೀಯರ ವ್ಯಾಪಾರಕ್ಕೆ ಅವಕಾಶವಿಲ್ಲ ಎಂದು ಭಜರಂಗದಳ, ವಿಶ್ವ ಹಿಂದೂ ಪರಿಷತ್‌ ಹಿಂದೂ ಜಾಗರಣ ವೇದಿಕೆಯ ಒತ್ತಾಯದ ಮೇರೆಗೆ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ ಕಲ್ಪಿಸಲು ತೀರ್ಮಾನಿಸಲಾಗಿದೆ. ದೇವಸ್ಥಾನದ ಆಡಳಿತ ಮಂಡಳಿಯ ಆಡಳಿತಾಧಿಕಾರಿಯಿಂದ ಸಹಾಯಕ ಕಮಿಷನರ್‌ಗೆ ಈಗಾಗಲೇ ನಿರ್ಣಯವನ್ನು ರವಾನಿಸಿದ್ದಾರೆ






0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo