ಹುಬ್ಬಳ್ಳಿ: ಗೋವನ್ನು ಮಾತೆ ಎಂದು ಬಿಜೆಪಿಯವರು ಕರೆಯುತ್ತಾರೆ. ಜೊತೆಗೆ ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಕೂಡಾ ಜಾರಿ ಮಾಡಿದ್ದಾರೆ. ಆದರೆ ಇದೇ ಕಾನೂನು ಗೋವಾದಲ್ಲಿ ಯಾಕೆ ಜಾರಿಯಾಗಿಲ್ಲ..?. ಬಿಜೆಪಿಗರಿಗೆ ಗೋವಾ ರಾಜ್ಯದ ಗೋ ಮಾತೆ ಅಲ್ಲವೇ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಬಿಜೆಪಿಗೆ ಪ್ರಶ್ನೆ ಮಾಡಿದರು.
ನಗರದಲ್ಲಿ ಜೆಡಿಎಸ್‌ನ ಚಿಂತನ ಮಂಥನ ಸಭೆಯಲ್ಲಿ ಭಾಗವಹಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋವಾದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಒಂದು ವೇಳೆ ಜಾರಿ ಮಾಡಿದ್ದರೆ, ಅಲ್ಲಿರುವ ಕ್ರೈಸ್ತರು ಇವರನ್ನು ಹೊಡೆಯುತ್ತಾರೆ. ಗೋವಾದಿಂದ ದನದ ಮಾಂಸ ರಾಜ್ಯಕ್ಕೆ ಬರುತ್ತಿದೆ, ಅದನ್ನು ಏಕೆ ತಡೆಯುತ್ತಿಲ್ಲ..?. ಚುನಾವಣೆ ಹತ್ತಿರ ಇರುವುದರಿಂದ ಸೋಲುವ ಭೀತಿಯಲ್ಲಿರುವ ಬಿಜೆಪಿ ಗೋವು, ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧದ ಹೆಸರಿನಲ್ಲಿ ಮತ ಧೃವೀಕರಣ ಮಾಡಲು ಹೊರಟಿದೆ ಎಂದು ಗಂಭೀರ ಆರೋಪ ಮಾಡಿದರು.
.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ