ನವ ದೆಹಲಿ - ಕೇಂದ್ರ ಸರಕಾರದ ಮಹತ್ವಕಾಂಕ್ಷಿಯುಳ್ಳ 'ಸೆಂಟ್ರಲ್ ವಿಸ್ಟಾ' ಯೋಜನೆಯಡಿ 970 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಸಂಸತ್ ಭವನವನ್ನು ಮೇ 28 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.
ಹವನ, ಪೂಜನ ಮತ್ತಿತರ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೂತನ ಸಂಸತ್ ಭವನವನ್ನು ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯದ ಪ್ರಸಿದ್ಧ ಶೃಂಗೇರಿ ಮಠದ ಅರ್ಚಕರಿಂದ ವೇದ ಮಂತ್ರ ಪಠಣ ನಡೆಯಿತು. ಇದರೊಂದಿಗೆ ಗಣಪತಿ ಹೋಮ ಕೂಡ ನಡೆಸಲಾಯಿತು. ಈ ಕಾರ್ಯಕ್ರಮಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಎಸ್. ಜೈಶಂಕರ್, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಭಾಜಪದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಉಪಸ್ಥಿತರಿದ್ದರು.
ಐತಿಹಾಸಿಕ 'ಸೆಂಗೊಲ್' ಸ್ಥಾಪನೆ!
ಈ ಸಂದರ್ಭದಲ್ಲಿ ತಮಿಳುನಾಡಿನ ಶೈವ ಪುರೋಹಿತರ ಹಸ್ತದಿಂದ ಸಾತ್ವಿಕ ನಾದದ ನಡುವೆ ಪ್ರಧಾನಮಂತ್ರಿಯವರು ಐತಿಹಾಸಿಕ 'ಸೆಂಗೊಲ್' ಅಂದರೆ 'ಅಧಿಕಾರದ ಹಸ್ತಾಂತರದ ಸಂಕೇತ'ವಾದ 'ರಾಜದಂಡ'ವನ್ನು ಸ್ವೀಕರಿಸಿದರು. ಈ ವೇಳೆ ಪ್ರಧಾನಿಯವರು ಸೆಂಗೋಲ್‌ಗೆ ಸಾಷ್ಟಾಂಗ ನಮಸ್ಕಾರ ಮಾಡಿದರು. ನಂತರ ಲೋಕಸಭೆಯ ಸ್ಪೀಕರ್ ಆಸನದ ಬಲಭಾಗದಲ್ಲಿ ರಾಜದಂಡವನ್ನು ಸ್ಥಾಪಿಸಲಾಯಿತು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ