ನವದೆಹಲಿ: ಬಾಗೇಶ್ವರ್ ಧಾಮ್ ಟ್ರಸ್ಟ್ ಮುಖ್ಯಸ್ಥ ಆಚಾರ್ಯ ಧೀರೇಂದ್ರ ಶಾಸ್ತ್ರಿ ಅವರು ಹಿಂದುತ್ವ ಮತ್ತು ಪಾಕಿಸ್ತಾನದ ಬಗ್ಗೆ ಹೇಳಿಕೆ ನೀಡಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಧೀರೇಂದ್ರ ಶಾಸ್ತ್ರಿ ಅವರು ಗುಜರಾತ್‌ನ ಸೂರತ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ, ಜನರು ಒಗ್ಗೂಡಿದರೆ ಪಾಕಿಸ್ತಾನವನ್ನು ಕೂಡ ಹಿಂದೂ ರಾಷ್ಟ್ರವನ್ನಾಗಿ ಮಾಡಬಹುದು ಎಂದು ಹೇಳಿದರು.
ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವುದು ಹೇಗೆ ಸಾಧ್ಯ' ಎಂದು ಕೆಲವರು ಕೇಳುತ್ತಾರೆ, ಆದರೆ ಭಾರತವು ಈಗಾಗಲೇ ಹಿಂದೂ ರಾಷ್ಟ್ರವಾಗಿದೆ ಮತ್ತು ಹಾಗೆಯೇ ಉಳಿಯುತ್ತದೆ.ಅಯೋಧ್ಯೆಯ ನಂತರ (ರಾಮ ಮಂದಿರ ವಿಚಾರವನ್ನು ಉಲ್ಲೇಖಿಸಿ) ಈಗ ಮಥುರಾದ ಸರದಿ, ಆದ್ದರಿಂದ ಸನಾತನಿಗಳು ಎಚ್ಚೆತ್ತುಕೊಳ್ಳುವ ಸಮಯ ಬಂದಿದೆ ಎಂದು ಅವರು ಹೇಳಿದರು.
ಗುಜರಾತ್‌ನ ಜನರಿಂದ ಹಣ ಅಥವಾ ಖ್ಯಾತಿಯನ್ನು ಪಡೆಯುವ ಉದ್ದೇಶ ನನಗಿಲ್ಲ, ನೀವು ಒಗ್ಗಟ್ಟಾಗಿದ್ದರೆ, ಭಾರತ ಅಥವಾ ಪಾಕಿಸ್ತಾನವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುತ್ತೀರಿ" ಎಂದು ಹೇಳಿದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ