Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ತಮಿಳುನಾಡಿನವರನ್ನು ಭವಿಷ್ಯದ ಪ್ರಧಾನಿಯನ್ನಾಗಿ ಮಾಡಲು ಬಿಜೆಪಿ ಪ್ರಯತ್ನಿಸಲಿದೆ:-ಅಮಿತ್ ಶಾ

Udupifirst-udupinews-

 


ತಮಿಳುನಾಡಿನವರನ್ನು ಭವಿಷ್ಯದ ಪ್ರಧಾನಿಯನ್ನಾಗಿ ಮಾಡಲು ಬಿಜೆಪಿ ಪ್ರಯತ್ನಿಸಲಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಒಂಬತ್ತು ವರ್ಷಗಳ ಸಂಭ್ರಮಾಚರಣೆಗಾಗಿ ವೆಲ್ಲೂರು ಜಿಲ್ಲೆಯಲ್ಲಿ ಆಯೋಜಿಸಲಾದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಶಾ, ಮೂರನೇ ಬಾರಿಗೆ ಮೋದಿ ಸರ್ಕಾರವನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.

ತಮಿಳುನಾಡಿನ ಇಬ್ಬರು ನಾಯಕರಿಗೆ ಪ್ರಧಾನಿ ಆಗುವ ಅವಕಾಶ ಇತ್ತು. ಕಾಮರಾಜ್ ಮತ್ತು ಮೂಪನಾರ್ ಅವರಿಗೆ ದ್ರಾವಿಡ ಮುನ್ನೇತ್ರ ಕಳಗಂ ( ಡಿಎಂಕೆ) ಯಿಂದಾಗಿ ಪ್ರಧಾನಿಯಾಗುವ ಅವಕಾಶ ಕೈ ತಪ್ಪಿತ್ತು ಎಂದು ಆರೋಪಿಸಿದ ಅವರು, ಮುಂದಿನ ಪ್ರಧಾನಿ ತಮಿಳುನಾಡಿನವರೇ ಆಗಲಿದ್ದಾರೆ ಎಂಬ ಸಂದೇಶ ರವಾನಿಸಿದ್ದಾರೆ.

ತಮಿಳುನಾಡಿನ ಸೆಂಗೋಲ್ ಸಂಸತ್ತಿನಲ್ಲಿ ಸ್ಥಾಪಿಸಲಾಗಿದ್ದು, ಇದಕ್ಕಾಗಿ ಕೃತಜ್ಞತಾ ರೂಪದಲ್ಲಿ 39 ಲೋಕಸಭಾ ಕ್ಷೇತ್ರಗಳ ಪೈಕಿ ೨೦ ಕ್ಷೇತ್ರಗಳಲ್ಲಿ ಎನ್ ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಹಾಗೂ ಮುಂದಿನ ಪ್ರಧಾನಿ ತಮಿಳುನಾಡಿನವರೇ ಆಗಲಿದ್ದಾರೆ ಎಂದು ಜನರಿಗೆ ಶಾ ಮನವಿ ಮಾಡಿದರು.





0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo