ಬೆಂಗಳೂರು: ಅಗ್ನಿ ಶ್ರೀಧರ್ ಫೇಸ್ಬುಕ್ನಲ್ಲಿ ಬಜರಂಗದಳ ಕುರಿತಾಗಿ ಮಾಡಿರುವ ಪೋಸ್ಟ್ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ. ಈ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. 'ಪ್ರತಿ ಊರಿನಲ್ಲಿ ದ್ರಾವಿಡ ಪಡೆ ಆರಂಭಿಸಿ-ಬಜರಂಗದಳದ ಹುಡುಗರನ್ನು ಬದಲಿಸಿ, ಇಲ್ಲ ಬಾರಿಸಿ' ಎಂದು ಅಗ್ನಿ ಶ್ರೀಧರ್ ಹೇಳಿದ್ದರು. ಸದ್ಯ ಅಗ್ನಿ ಶ್ರೀಧರ್ ಬಜರಂಗದಳದ ಕುರಿತು ಆಡಿರುವ ಮಾತಿಗೆ ಕ್ರಮ ಕೈಗೊಳ್ಳುವಂತೆ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯ ಪೊಲೀಸ್ ಮಹಾನಿರ್ದೇಶಕರನ್ನು ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.
ಗರಂ ಆದ ಬಸನಗೌಡ ಪಾಟೀಲ್ ಯತ್ನಾಳ್!
ಬಜರಂಗದಳದ ಕುರಿತು ಅಗ್ನಿ ಶ್ರೀಧರ್ ಹೇಳಿದ್ದಾರೆ ಎನ್ನಲಾದ ಮಾತು ಹೊಸ ಚರ್ಚೆ ಹುಟ್ಟ ಹಾಕುತ್ತಿದ್ದಂತೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಗರಂ ಆಗಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ಯತ್ನಾಳ್, 'ಬಜರಂಗದಳದ ಹುಡುಗರನ್ನು ಬದಲಿಸಿ ಅಥವಾ ಬಾರಿಸಿ ಎಂದು ಯಾರೋ ರೌಡಿ ಕರೆ ಕೊಟ್ಟಿದ್ದ ಪೋಸ್ಟರ್ ಫೇಸ್ಬುಕ್ನಲ್ಲಿ ಹರಿದಾಡುತ್ತಿದೆ. ನೈತಿಕ ಪೊಲೀಸ್ ಗಿರಿ ವಿರುದ್ಧ ಉದ್ದುದ್ದ ಭಾಷಣ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಕೃಪಾ ಪೋಷಿತ ನಾಟಕ ಮಂಡಳಿ ಇದರ ವಿರುದ್ಧ ಧ್ವನಿ ಎತ್ತುವರೇ? ಎಂದು ಪ್ರಶ್ನಿಸಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ