ಉಡುಪಿ : ನೇತ್ರಜ್ಯೋತಿ ಕಾಲೇಜಿನಲ್ಲಿ ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ನಗ್ನ ವಿಡಿಯೋ ಚಿತ್ರೀಕರಿಸಿ ಹಂಚಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವಿದ್ಯಾರ್ಥಿನಿಯರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ.
ಇಂಥ ಕೃತ್ಯ ನಡೆದೇ ಇಲ್ಲ ಇದು ಕೇವಲ ಊಹಾಪೋಹ ಎಂದು ಮಂಗಳವಾರ ವಾದಿಸಿದ್ದ ಜಿಲ್ಲಾ ಎಸ್‌ಪಿ ಮಧ್ಯಾಹ್ನದ ವೇಳೆಗೆ ಕೃತ್ಯ ನಡೆದಿರುವುದು ಹೌದಾದರೂ, ವಿಡಿಯೋ ಇನ್ನೂ ಎಲ್ಲೂ ವಾಟ್ಸಪ್ ಮತ್ತು ಫೇಸ್‌ಬುಕ್ ನಲ್ಲಿ ಶೇರ್ ಆಗಿಲ್ಲ ಎಂದು ಸಮರ್ಥಿಸಿಕೊಂಡಿದ್ದರು. ಜೊತೆಗೆ ವಿದ್ಯಾರ್ಥಿನಿಯರನ್ನು ಅಮಾನತುಗೊಳಿಸಲಾಗಿದೆ ಎಂದಿದ್ದರು.
ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದೇ ಈ ಕುರಿತು ದೂರು ದಾಖಲಿಸಿದ್ದ ಮಾನವ ಹಕ್ಕು ಹೋರಾಟಗಾರ್ತಿಗೆ ಕಿರುಕುಳ ನೀಡಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಪ್ರಕರಣವನ್ನು ಖಂಡಿಸಿ ಶುಕ್ರವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಬಿಜೆಪಿ ನಿರ್ಧರಿಸಿತ್ತು. ಪ್ರಕರಣ ತೀವ್ರ ತಿರುವು ಪಡೆಯುತ್ತಿರುವ ಹಿನ್ನೆಲೆಯಲ್ಲಿ ಕೊನೆಗೂ ಪೊಲೀಸರು ಕಾಪು ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.
ಆರೋಪಿಗಳಾದ ಸಬನಾಜ್, ಅಲೀಮಾ ಜೊತೆಗೆ ಕಾಲೇಜು ಆಡಳಿತ ಮಂಡಳಿಯ ವಿರುದ್ಧವೂ ಸಹ ದೂರು ದಾಖಲಿಸಿಕೊಳ್ಳಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ