ಅಮ್ಮ ಅಪ್ಪನೊಂದಿಗೆ ಅಮರನಾಥ ಯಾತ್ರೆ ಮಾಡಿದ್ದು ಎಂದಿಗೂ ಮರೆಯದ ಅನುಭವ ನೀಡಿದೆ. ಅದನ್ನು ಪದಗಳಲ್ಲಿ ವರ್ಣಿಸುವುದಕ್ಕೆ ಆಗುವುದಿಲ್ಲ. ಇಂತಹ ಯಾತ್ರೆಯು ಸಾಧ್ಯವಾಗಿದ್ದು ತಂದೆ ತಾಯಿಗಳ ಆಶೀರ್ವಾದದಿಂದ ಎಂದು ಸಾಯಿ ಪಲ್ಲವಿ ಬರೆದುಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಾಯಿ ಪಲ್ಲವಿ ಕಡಿಮೆ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಪಾತ್ರಗಳ ಆಯ್ಕೆಯಲ್ಲಿ ತುಂಬಾನೇ ಕಾಳಜಿ ವಹಿಸುತ್ತಿದ್ದಾರೆ. ಅದಕ್ಕೆ ಕಾರಣ ಏನು ಎನ್ನುವುದನ್ನು ಈವರೆಗೂ ಅವರು ಹೇಳಿಕೊಂಡಿಲ್ಲ. ಅವರು ಸಿನಿಮಾ ರಂಗವನ್ನೇ ತೊರೆಯಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ಕುರಿತು ನಟಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ