ಹಂಗಾರಕಟ್ಟೆ : ಉಡುಪಿ ಜಿಲ್ಲೆಯ ಹೆಸರಾಂತ ಸ್ವಾತಂತ್ರ್ಯ ಪೂರ್ವದ ಪ್ರಾಚೀನ ಬಂದರು ಆಗಿರುವ ಹಂಗಾರಕಟ್ಟೆ ಬಂದರಿಗೆ ಕರ್ನಾಟಕ ಸರ್ಕಾರದ ನೂತನ ಮೀನುಗಾರಿಕ ಮತ್ತು ಬಂದರು ಹಾಗೂ ಒಳನಾಡು ಖಾತೆಯ ಸಚಿವರಾದ ಮಂಕಾಳ. ಎಸ್ ವೈದ್ಯ ಭೇಟಿ ನೀಡಿದರು.
ಭೇಟಿ ನೀಡಿದ ಅವರು ಮೀನುಗಾರಿಕ ಜಟ್ಟಿಯನ್ನು ಅಭಿವೃದ್ಧಿಪಡಿಸುವುದರೊಂದಿಗೆ ಅಳಿವೆ ಬಾಗಿಲಿನಲ್ಲಿ ಬ್ರೇಕ್ ವಾಟರ್ ಸಿಸ್ಟಮ್ ಅನ್ನು ಅಳವಡಿಸುತ್ತೇವೆ ಹಾಗೂ ಮೀನುಗಾರರೊಂದಿಗೆ ಸದಾ ಸಂಪರ್ಕದಲ್ಲಿರುತ್ತೇನೆ ಎಂದರು.
ಈ ಸಂದರ್ಭದಲ್ಲಿ ಜನತಾ ಫಿಶ್ ಮಿಲ್ ನ ಪ್ರವರ್ತಕರಾದ ಆನಂದ್ ಸಿ ಕುಂದರ್, ಸಮಾಜ ಸೇವಕರಾದ ನಾಡೋಜ ಜಿ. ಶಂಕರ್, ಯಶಸ್ವಿನಿ ಫಿಶ್ ಮಿಲ್ ನ ಮಾಲಿಕರಾದ ಕೇಶವ್ ಕುಂದರ್, ಉದ್ಯಮಿ ಆರ್. ಎನ್. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ