Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಇಂದಿನಿಂದ ನಂದಿನಿ ಹಾಲು ಮೊಸರು ಪ್ರತಿ ಲೀಟರ್‌ಗೆ 3ರೂ ಹೆಚ್ಚಳ

Udupi

 


ಬೆಂಗಳೂರು: ಹಣ್ಣು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ರಾಜ್ಯದ ಜನರು ತತ್ತರಿಸಿ ಹೋಗಿದ್ದಾರೆ. ಟೊಮೇಟೊ ಬೆಲೆ 100-150 ರೂ.ನಂತೆ ಮಾರಾಟವಾಗುತ್ತಿದೆ. ಬೆಲೆ ಏರಿಕೆಯ ಬಿಸಿಯಿಂದ ಕಂಗಾಲಾಗಿರುವ ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎದುರಾಗಿದೆ.

ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 3 ರೂ. ಹೆಚ್ಚಳ ಮಾಡಲಾಗಿದ್ದು, ಇಂದಿನಿಂದಲೇ  ಪರಿಷ್ಕೃತ ದರ ಜಾರಿಗೆ ಬರಲಿದೆ. ಜುಲೈ 21ರಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯನವರು ರಾಜ್ಯದ ಎಲ್ಲಾ ಹಾಲು ಒಕ್ಕೂಟಗಳು ಹಾಗೂ ಕೆಎಂಎಫ್‌ ಅಧ್ಯಕ್ಷರ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಪ್ರತಿ ಲೀಟರ್ ಹಾಲಿಗೆ 3 ರೂ. ಹೆಚ್ಚಳ ಮಾಡಲು ನಿರ್ಧಾರ ಕೈಗೊಳ್ಳಲಾಗಿತ್ತು. ಅದರಂತೆ ಇಂದಿನಿಂದಲೇ ಹೊಸ ದರ ಜಾರಿಗೆ ಬರಲಿದ್ದು, ಗ್ರಾಹಕರ ಜೇಬಿಗೆ ಹೆಚ್ಚಿನ ಹೊರೆ ಬೀಳಲಿದೆ.

ಯಾವುದರ ಬೆಲೆ ಎಷ್ಟು..?

1. ನಂದಿನಿ (ಟೋನ್ಡ್ ಹಾಲು) ಅರ್ಧ ಲೀಟರ್‌ಗೆ 23 ರೂ. ಹಾಗೂ 1 ಲೀಟರ್‌ಗೆ 43 ರೂ. ಆಗಲಿದೆ.

2. ನಂದಿನಿ (ಡಬಲ್ ಟೋನ್ಡ್ ಹಾಲು) ಅರ್ಧ ಲೀಟರ್​ಗೆ 22 ರೂ. ಹಾಗೂ 1 ಲೀಟರ್‌ಗೆ 41 ರೂ. ಆಗಲಿದೆ.

3. ನಂದಿನಿ ಶುಭಂ ಅರ್ಧ ಲೀಟರ್​ಗೆ 26 ರೂ. ಹಾಗೂ 1 ಲೀಟರ್‌ಗೆ 48 ರೂ. ಆಗಲಿದೆ.

4. ನಂದಿನಿ ಸ್ಪೆಷಲ್ ಅರ್ಧ ಲೀಟರ್​ಗೆ 26 ರೂ. ಮತ್ತು 1 ಲೀಟರ್‌ಗೆ 48 ರೂ. ಆಗಲಿದೆ.

5. ನಂದಿನಿ (ಸಮೃದ್ಧಿ) ಅರ್ಧ ಲೀಟರ್​ಗೆ 27 ರೂ. ಹಾಗೂ 1 ಲೀಟರ್‌ಗೆ 51 ರೂ. ಆಗಲಿದೆ.

6. ನಂದಿನಿ ಹಸುವಿನ ಹಾಲು ಅರ್ಧ ಲೀಟರ್​ಗೆ 25 ರೂ. ಹಾಗೂ 1 ಲೀಟರ್‌ಗೆ 54 ರೂ. ಆಗಲಿದೆ.





0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo