Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಸೌಟು ಪೊರಕೆ ಹಿಡಿಯುವ ಕೈಯ್ಯಲ್ಲಿ ಶಸ್ತ್ರಾಸ್ತ್ರ ಹಿಡಿಯಿರಿ:-ಉಡುಪಿಯಲ್ಲಿ ಮಹಿಳೆಯರಿಗೆ ಶರಣ್ ಪಂಪ್‌ವೆಲ್ ಕರೆ

Udupi

 


ಉಡುಪಿ: ಸನಾತನ ಹಿಂದೂ ಸಂಸ್ಕೃತಿ ನಾಶ ಮಾಡಲು ರಾಕ್ಷಸಿಯರು ಬಂದಿದ್ದರು, ಜಿಹಾದಿ ರಾಕ್ಷಸಿಯರ ಮೂಲಕ ಹಿಂದೂ ಹೆಣ್ಮಕ್ಕಳ ಮಾನ ತೆಗೆಯಲು ಬಂದಿದ್ದಾರೆ ಎಂದು ವಿಹಿಂಪ ಮುಖಂಡ ಶರಣ್ ಪಂಪ್ ವೆಲ್ ಕಿಡಿಕಾರಿದ್ದಾರೆ.

ಉಡುಪಿ ವಿಡಿಯೋ ಪ್ರಕರಣ ವಿಚಾರವಾಗಿ ಮಾತನಾಡಿ, ಜಿಹಾದಿ ರಾಕ್ಷಸಿಯರಿಗೆ ಹಿಂದು ರಕ್ಷಕರಾಗಿ ಉತ್ತರ ಕೊಡುತ್ತೇವೆ, ಇಂತಹ ದಾಳಿ ಇಂದಿಗೇ ಕೊನೆಯಾಗಬೇಕು, ಹಿಂದೂ ತಾಯಂದಿರು ಎಚ್ಚರ ಆಗಬೇಕು,ಸೌಟು ಪೊರಕೆ ಹಿಡಿಯುವ ಕೈಯ್ಯಲ್ಲಿ ಶಸ್ತ್ರಾಸ್ತ್ರ ಹಿಡಿಯಿರಿ, ಅನ್ಯಾಯವಾದಾಗ ತಲವಾರು, ಕತ್ತಿ ಹಿಡಿಯಲು ರೆಡಿಯಾಗಿ, ನಮ್ಮ ತಂಟೆಗೆ ಬಂದರೆ ಸುಮ್ಮನಿರಲ್ಲ ಎಂಬ ಎಚ್ಚರಿಕೆ ಕೊಡಬೇಕಾಗಿದೆ.

ಬ್ಲ್ಯಾಕ್ ಮೇಲ್ ಮಾಡಲು, ಮತಾಂತರಕ್ಕಾಗಿ ವೀಡಿಯೋ ಬಳಸುತ್ತಾರೆ, ಆರೋಪಿಗಳ ಮೇಲೆ 354 ಸೆಕ್ಷನ್ ಹಾಕಲಿಲ್ಲ? ಮೂವರು ವಿದ್ಯಾರ್ಥಿನೀಯರ ಮೊಬೈಲ್ ಸೀಜ್ ಮಾಡಲಿಲ್ಲ, ಮೊಬೈಲ್ ನಲ್ಲಿ ಇನ್ನೊಂದು ಯುವತಿಯ ನಗ್ನ ವೀಡಿಯೋ ಸಿಕ್ಕಿದೆ, ಒಂದು ವರ್ಷದಿಂದ ಇಂತಹ ಘಟನೆ ಆ ಕಾಲೇಜಲ್ಲಿ ಆಗುತ್ತಿದೆ, ಕಾಲೇಜಿನ ಶಿಕ್ಷಕಿ ಬಹಳ ಹಿಂದೆ ಆಡಳಿತ ಮಂಡಳಿಗೆ ತಿಳಿಸಿದರೂ ಕ್ರಮ ಕೈಗೊಂಡಿಲ್ಲ, ಘಟನೆ ಮರುಕಳಿಸಬಾರದು, ಆಡಳಿತ ಮಂಡಳಿಗೆ ಎಚ್ಚರಿಕೆ ಆಡಳಿತಾಧಿಕಾರಿ ಅಬ್ದುಲ್ ಖಾದರ್ ನನ್ನು ಕಾಲೇಜಿನಿಂದ ವಜಾ ಮಾಡಿ ವಜಾ ಮಾಡದಿದ್ದರೆ ಪನಿಷ್ಮೆಂಟ್ ಮಾಡಲು ಗೊತ್ತಿದೆ, ಮೂವರು ಆರೋಪಿತ ವಿದ್ಯಾರ್ಥಿನೀಯರಿಗೆ ನಿಷೇಧಿತ ಪಿಎಫ್ ಐ ಜೊತೆ ನಂಟು ಇದೆ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ಸರಕಾರ ಸ್ತ್ರೀ ಶಕ್ತಿ ಗ್ಯಾರೆಂಟಿ ಕೊಡುತ್ತಿದ್ದೀರಿ, ಮದರಸ ಶಿಕ್ಷಣ ಭಾರತದ ಐಕ್ಯತೆಗೆ ಧಕ್ಕೆಯಾಗುತ್ತಿದೆ, ರಾಜ್ಯದಲ್ಲಿ ಮದರಸ ಶಿಕ್ಷಣ ಬ್ಯಾನ್ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯರಿಗೆ ಮನವಿ ಮಾಡಿದ್ದಾರೆ.








0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo